Thursday, November 21, 2024
Google search engine
Homeಮುಖಪುಟಪ್ರಗತಿಪರ ಆಲೋಚನೆ ಇದ್ದ ಕಡೆ ಸಮೃದ್ಧಿ - ಸಚಿವ ಪ್ರಿಯಾಂಕ್ ಖರ್ಗೆ

ಪ್ರಗತಿಪರ ಆಲೋಚನೆ ಇದ್ದ ಕಡೆ ಸಮೃದ್ಧಿ – ಸಚಿವ ಪ್ರಿಯಾಂಕ್ ಖರ್ಗೆ

ಯಾವ ಸಮಾಜದಲ್ಲಿ ಪ್ರಬುದ್ಧತೆ ಇರುತ್ತದೆ, ಆ ಸಮಾಜದಲ್ಲಿ ಪ್ರಗತಿಪರವಾದ ಆಲೋಚನೆಗಳಿರುತ್ತವೆ, ಎಲ್ಲಿ ಪ್ರಗತಿಪರ ಆಲೋಚನೆಗಳಿರುತ್ತವೆಯೋ ಅಂತಹ ಕಡೆ ಮಾತ್ರ ನಾವು ಸಮೃದ್ಧಿಯನ್ನು ಕಾಣಬಹುದಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಶಿಕ್ಷಣವು ಜಗತ್ತನ್ನು ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ’ ಎಂಬ ನೆಲ್ಸನ್ ಮಂಡೆಲಾ ಅವರ ನುಡಿಯನ್ನು ನೆನಪು ಮಾಡಿಕೊಟ್ಟು, ಮಕ್ಕಳು ಹೆಚ್ಚು ಹೆಚ್ಚು ಓದಿ ಉನ್ನತ ಹುದ್ದೆಗಳಿಗೆ ಹೋಗಬೇಕೆಂದು ತಿಳಿಸಿದ್ದಾರೆ.

ಉನ್ನತ ಅಧಿಕಾರಿಗಳು ಆಗಿಂದಾಗಲೇ ಗ್ರಾಮೀಣ ಶಾಲೆಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ಕಲಿಯುವ ಮಕ್ಕಳಿಗೆ ಮಾದರಿಯಾಗಬೇಕೆಂದು ಸಲಹೆ ನೀಡಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ದೊಡ್ಡಜಾಲ ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ಆಯೋಜಿದ್ದ ಗ್ರಂಥಪಾಲಕರ ದಿನಾಚರಣೆಯಲ್ಲಿ ಭಾಗವಹಿಸಿ ಗ್ರಂಥಾಲಯ ಪಿತಾಮಹ ಎಸ್.ವಿ.ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ದೊಡ್ಡಜಾಲ ಗ್ರಾಮ ಪಂಚಾಯತಿ ರಾಷ್ಟ್ರ ಪ್ರಶಸ್ತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ, ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಕೃಷ್ಣ ಭೈರೇಗೌಡರ ಈ ಆಶಯ ಕಾರ್ಯಗತವಾಗಲಿ ಎಂದು ಹಾರೈಸಿದರು.

ದೊಡ್ಡಜಾಲ ಶಾಲೆಯ ಮಕ್ಕಳು ಕ್ರೀಡಾ ಸಾಮಗ್ರಿಗಳ ಅವಶ್ಯಕತೆಯಿದೆ. ಅವುಗಳನ್ನು ತಾವು ವೈಯಕ್ತಿಕವಾಗಿ ಕೊಂಡು ಶಾಲೆಗೆ ಕೊಡುಗೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ದೊಡ್ಡಜಾಲ ಗ್ರಂಥಾಲಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಹೊಸದಾಗಿ ಎರಡು ಮಹಡಿ ನಿರ್ಮಿಸಲು 25 ಲಕ್ಷ ರೂ. ಒದಗಿಸುವುದಾಗಿ ಹೇಳಿದ್ದಾರೆ.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಿ, ಗ್ರಂಥಾಲಯದಲ್ಲಿನ ಬಳಕೆಗಾಗಿ ಶೈಕ್ಷಣಿಕ ಸ್ತಕಗಳು, ಕಥೆಗಳು ,ಕೌಶಲ್ಯಾಧಾರಿತ ವಿಡಿಯೊಗಳು ಹಾಗೂ ಟ್ಯಾಬ್ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ದೊಡ್ಡಜಾಲ ಗ್ರಾಮ ಪಂಚಾಯತಿ ಅಧ್ಯಕ್ಷ ಆರ್,ಭೈರೇಗೌಡ, ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ, ಗ್ರಂಥಾಲಯ ಮೇಲ್ವಿಚಾರಕಿ ಸುವರ್ಣಮ್ಮ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular