Friday, September 20, 2024
Google search engine
Homeಮುಖಪುಟವಕೀಲರ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ - ಸಿಎಂ ಸಿದ್ದರಾಮಯ್ಯ

ವಕೀಲರ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ – ಸಿಎಂ ಸಿದ್ದರಾಮಯ್ಯ

ವಕೀಲರ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಮೈಸೂರಿನಲ್ಲಿ ನಡೆಯುತ್ತಿರುವ 10ನೇ ರಾಜ್ಯ ವಕೀಲರ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕನಿಷ್ಠ ಎರಡು ವರ್ಷಗಳಿಗೊಮ್ಮೆ ವಕೀಲರ ಸಮ್ಮೇಳನ ನಡೆಯಬೇಕು ಎಂದು ಹೇಳಿದ್ದಾರೆ.

ಹಿಂದಿನ ಸರ್ಕಾರ ವಕೀಲರ ಹಿತರಕ್ಷಣಾ ಕಾಯ್ದೆಯ ಕರಡು ತಯಾರು ಮಾಡಿದಾಗ ನಾನು ಬೆಳಗಾವಿಯ ಅಧಿವೇಶನದಲ್ಲಿ ಈ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯ ಮಾಡಿದ್ದೆ ಎಂದು ತಿಳಿಸಿದ್ದಾರೆ.

ಮುಂಬರುವ ಎರಡನೇ ಅಧಿವೇಶನದಲ್ಲಿ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೊಳಿಸುತ್ತೇವೆ. ನನ್ನ ನೇತೃತ್ವದ ಸರ್ಕಾರ ಐದು ಗ್ಯಾರೆಂಟಿಗಳನ್ನು ಜಾರಿ ಮಾಡುತ್ತದೆ. ಅಷ್ಟೇ ಅಲ್ಲ ವಕೀಲರ ಹಿತರಕ್ಷಣಾ ಕಾಯ್ದೆಯನ್ನು ನಮ್ಮ ಸರ್ಕಾರದ 6 ನೇ ಗ್ಯಾರಂಟಿಯಾಗಿ ಜಾರಿ ಮಾಡುತ್ತದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಕಚೇರಿಗೆ ನಿವೇಶನ ಕೊಡಲು ಸಿದ್ದನಿದ್ದೇನೆ. ವಕೀಲರ ಉಳಿದ ಬೇಡಿಕೆಗಳ ಕುರಿತು ಪರಿಶೀಲನೆ ಮಾಡಿ ತಿರ್ಮಾನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಎರಡು ದಿನಗಳವರೆಗೆ ನಡೆಯಲಿರುವ ವಕೀಲರ ಸಮ್ಮೇಳನ ವಕೀಲರ ಸಮಸ್ಯೆ ಜೊತೆಗೆ ಜನರ ಸಮಸ್ಯೆಗಳ ಕುರಿತು ಚೆರ್ಚೆಯಾಗುವಂತೆ ಆಗಲಿ ಎಂದು ಹಾರೈಸಿದ್ದಾರೆ.

ದೇಶದಲ್ಲಿ ರಾಜ-ಮಹಾರಾಜರ ಕಾಲದಲ್ಲಿ ಮನುವಾದಕ್ಕೆ ಅನುಗುಣವಾಗಿ ನ್ಯಾಯಾದಾನ ನೀಡಲಾಗುತ್ತಿತ್ತು. ಮನುವಾದದಲ್ಲಿ ಸಾಕಷ್ಟು ತಾರತಮ್ಯದ ನ್ಯಾಯಧಾನ ವ್ಯವಸ್ಥೆ ಇತ್ತು. ಆದರೆ ಸಂವಿಧಾನ ಜಾರಿಯಾದ ನಂತರ ಎಲ್ಲರೂ ಕಾನೂನಿನ ಮುಂದೆ ಸಮಾನವಾಗಿ ಕಾಣಲಾಗುತ್ತಿದೆ. ಇದನ್ನು ಸಂವಿಧಾನ ಸ್ಪಷ್ಟವಾಗಿ ಹೇಳುತ್ತದೆ ಎಂದಿದ್ದಾರೆ.

ಕರ್ನಾಟಕ ರಾಜ್ಯ ವಕೀಲರು ದೇಶಾದ್ಯಂತ ಹಲವಾರು ಪ್ರತಿಭಾವಂತ ವಕೀಲರು ಹಾಗೂ ನ್ಯಾಯಾಧೀಶರಾಗಿದ್ದಾರೆ. ಸಂವಿಧಾನದಲ್ಲಿ ಸಮಾನ ಅವಕಾಶಗಳನ್ನು ಒದಗಿಸಿದ್ದರಿಂದ್ದಲೇ ಹಲವಾರು ತಳ ಸಮುದಾಯದ ಜನರು ಅವಕಾಶ ಬಳಿಸಿಕೊಂಡು ಪ್ರತಿಭಾವಂತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ತಳ ಸಮುದಾಯ ಜನ ವಕೀಲರಾಗುವುದನ್ನು ಕೆಲವು ಜನ ವಿರೋಧಿಸುತ್ತಿದ್ದರು. ಅದರೆ ತಳ ಸಮುದಾಯದ ಜನ ಅವಕಾಶ ಬಳಸಿಕೊಂಡು ವಕೀಲರಾಗುತ್ತಿರುವುದು ಸಂತಸದ ಸಂಗತಿ ಎಂದರು.

ನಾನು ಕಾನೂನು ಓದಿದ್ದರಿಂದಲೇ ನನಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿತು. ಅಂಬೇಡ್ಕರ್ ಗೆ ಕಾನೂನು ಅಧ್ಯಯನ ಅವಕಾಶ ಸಿಕ್ಕಿದ್ದರಿಂದಲೇ ಭಾರತಕ್ಕೆ ಅತ್ಯಂತ ಉತ್ತಮವಾದ ಸಂವಿಧಾನ ನೀಡಲು ಸಾಧ್ಯವಾಯಿತು ಎಂದು ವಿವರಿಸಿದ್ದಾರೆ.

ಇವತ್ತಿನ‌ ಸಮಾಜದಲ್ಲಿ ಕೆಲವು ಜನ ಸಂವಿಧಾನವನ್ನು ವಿರೋಧಿಸುತ್ತಿದ್ದಾರೆ. ಎಳೆ ವಯಸ್ಸಿನ ಮಕ್ಕಳಲ್ಲಿ ಸಂವಿಧಾನ ವಿರೋಧಿ ಮನಸ್ಥಿತಿಯನ್ನು ತುಂಬಲಾಗುತ್ತಿದೆ. ಇಂತಹ ಸಮಾವೇಶಗಳ ಮೂಲಕ ಸಂವಿಧಾನದ ಆಶಯಗಳು ಮತ್ತು ಸಂವಿಧಾನ ರಕ್ಷಣೆಗಾಗಿ ಎಲ್ಲರೂ ಬಹಳ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ಸಮಾಜದಲ್ಲಿ ಈಗಲೂ ಅಸಮಾನತೆ ಇದೆ, ಅಸಮಾನತೆ ಹೋಗಲಾಡಿಸಲು ಎಲ್ಲರೂ ಶ್ರಮಿಸಬೇಕು. ಅಂಬೇಡ್ಕರ್ ಬರಹ ಹಾಗು ಭಾಷಣಗಳನ್ನು ಎಲ್ಲರೂ ಓದಬೇಕು. ಕೆಳ ಹಂತದ ನ್ಯಾಯಾಲಯಗಳಲ್ಲಿ ಮಿಸಲಾತಿ ಇದೆ. ಮೇಲಿನ ಕೋರ್ಟ್ ನಲ್ಲಿಯೂ ಮೀಸಲಾತಿ ಜಾರಿಗೆ ಬರಬೇಕು ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular