Saturday, October 19, 2024
Google search engine
Homeಜಿಲ್ಲೆಜನ್ಮದಿನದ ಅಂಗವಾಗಿ ಮಕ್ಕಳಿಂದ ಕಾಲಿಗೆ ಬೀಳಿಸಿಕೊಂಡು ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ - ಪ್ರಗತಿಪರರ ಟೀಕೆ

ಜನ್ಮದಿನದ ಅಂಗವಾಗಿ ಮಕ್ಕಳಿಂದ ಕಾಲಿಗೆ ಬೀಳಿಸಿಕೊಂಡು ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ – ಪ್ರಗತಿಪರರ ಟೀಕೆ

ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಅವರು ವಿದ್ಯಾರ್ಥಿಗಳಿಂದ ತನ್ನ ಕಾಲಿಗೆ ಬೀಳಿಸಿಕೊಂಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ತುಮಕೂರು ಹೊರವಲಯದ ಬೆಳಗುಂಬ ಬಳಿ ಇರುವ ರೆಡ್ ಕ್ರಾಸ್ ವಸತಿ ಶಾಲೆಯಲ್ಲಿ ಡಾ.ಸಿ.ಸೋಮಶೇಖರ್ ತನ್ನ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಸತಿ ಶಾಲೆಯ ಮಕ್ಕಳಿಂದ ತನ್ನ ಕಾಲಿಗೆ ಬೀಳಿಸಿಕೊಂಡಿದ್ದಾರೆ. ಇದು ಪ್ರಗತಿಪರರ ಆಕ್ರೋಶಕ್ಕೆ ಕಾರಣವಾಗಿದೆ.

ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಮಕ್ಕಳಿಂದ ಕಾಲಿಗೆ ಬೀಳಿಸಿಕೊಂಡಿರುವುದು ಖಂಡನೀಯ ಎಂದು ಕೆ. ನಾಗಣ್ಣ ಟೀಕಿಸಿದ್ದಾರೆ.

ಡಾ.ಸಿ.ಸೋಮಶೇಖರ, ನಿವೃತ್ತ ಐಎಎಸ್ ಆಧಿಕಾರಿ, ತುಮಕೂರಿನಲ್ಲಿ ಜಿಲ್ಲಾಧಿಕಾರಿಗಳಾಗಿದ್ದರು. ನಿವೃತ್ತಿಯ ಬಳಿಕ ಬಿಜೆಪಿ ಸರ್ಕಾರದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ವಚನಗಳನ್ನು ನಿರರ್ಗಳವಾಗಿ ಶರಣರ ವಚನಗಳನ್ನು ಉಲ್ಲೇಖಿಸಿ ಭಾಷಣ ಮಾಡುವ ಡಾ.ಸಿ.ಸೋಮಶೇಖರ್ ಶರಣ ಪರಂಪರೆಯಲ್ಲಿ ಬೆಳೆದು ಬಂದವರು. ಶರಣರು ಕಾಲಿಗೆ ನಮಸ್ಕರಿಸುವುದನ್ನು ವಿರೋಧಿಸುತ್ತಾರೆ. ಆದರೆ ಸೋಮಶೇಖರ್ ಮಕ್ಕಳಿಂದ ಕಾಲಿಗೆ ಬೀಳಿಸಿಕೊಂಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ ಎಂಬ ಮಾತುಗಳು ಪ್ರಗತಿಪರರಿಂದ ವ್ಯಕ್ತವಾಗಿವೆ.

ತುಮಕೂರಿನ ಬೆಳಗುಂಬದ ರೆಡ್ ಕ್ರಾಸ್ ವಸತಿ ಶಾಲೆಯಲ್ಲಿ ಸೋಮಶೇಖರ್ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡು, ಅಲ್ಲಿನ ಮಕ್ಕಳಿಗೆ ಅವರ ಖರ್ಚಿನಲ್ಲಿ ಊಟ ಹಾಕಿಸಿದ್ದಾರೆ. ಒಂದೊತ್ತಿನ ಊಟ ಹಾಕಿಸಿದ ಮಾತ್ರಕ್ಕೆ ಹೀಗೆ ಕಾಲಿಗೆ ಬೀಳಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಗತಿಪರರು ಪ್ರಶ್ನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular