ಮಣಿಪುರದಲ್ಲಿ ಕ್ರೈಸ್ತ ಸಮುದಾಯದ ಮೇಲಾಗುತ್ತಿರುವ ಹಿಂಸಾಚಾರ, ಮಹಿಳೆಯರ ಮೇಲಿನ ಅತ್ಯಾಚಾರ, ಬೆತ್ತಲೆ ಮೆರವಣಿಗೆಯನ್ನು ಖಂಡಿಸಿ, ತುಮಕೂರಿನಲ್ಲಿ ಕೈಸ್ತರು ಪ್ರತಿಭಟನೆ ನಡೆಸಿದರು.
ತುಮಕೂರು ನಗರದ ಚರ್ಚ್ ಸರ್ಕಲ್ ಬಳಿ ಇರುವ ವೆಸ್ಲಿ ದೇವಾಲಯದ ಬಳಿ ಸಮಾವೇಶಗೊಂಡ ಕ್ರೈಸ್ತ ಸಮುದಾಯದ ಸಾವಿರಾರು ಜನರು ಶಾಂತಿಯ ಸಂಕೇತವಾದ ಪಾರಿವಾಳವನ್ನು ಹಾರಿ ಬಿಡುವ ಮೂಲಕ ಮೌನ ಮೆರವಣಿಗೆ ನಡೆಸಿದರು. ಬಳಿಕ ಟೌನ್ ಹಾಲ್ ಗೆ ತೆರಳಿ ಮಾನವ ಸರಪಳಿ ನಿರ್ಮಿಸಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ಕ್ರೈಸ್ತ ವಿಭಾಗದ ಮುಖ್ಯಸ್ಥ ರೆವರೆಂಡ್ ಫಾದರ್ ಮನೋಜ್ ಕುಮಾರ್, ಇತ್ತೀಚಗೆ ಮಣಿಪುರದಲ್ಲಿ ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಮೈತೇಯಿ ಜನಾಂಗಕ್ಕೆ ಸೇರಿದ ಇಬ್ಬರು ಪುರುಷರು, ಕುಕ್ಕಿ ಜನಾಂಗಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿರುವುದು ಅಮಾನವೀಯ ಕೃತ್ಯವಾಗಿದೆ ಎಂದು ಹೇಳಿದ್ದಾರೆ.
ತುಮಕೂರು ಕ್ಷೇತ್ರದ ಎಲ್ಲಾ ಸಿಎಸ್ಐ ಸಭೆಗಳ ಪರವಾಗಿ ನಾವು ಮೌನ ಮೆರವಣಿಗೆ ಮಾಡುವ ಮೂಲಕ ಘಟನೆಯನ್ನು ಖಂಡಿಸಿ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಸಾರುತಿದ್ದೇವೆ ಎಂದು ರೆವರೆಂಡ್ ಫಾದರ್ ಮನೋಜ್ ಕುಮಾರ್ ತಿಳಿಸಿದರು.
ಪ್ರತಿಭಟನೆಯಲ್ಲಿ ರೆವರೆಂಡ್ ಫಾದರ್ ಗಳಾದ ಮಿಥುನ್ ಕುಮಾರ್, ಮಾರ್ಗನ್ ಸಂದೇಶ್, ಸ್ಯಾಮ್ಸನ್, ಸಂಜಯ್, ವಿಕ್ಟರ್ ಹೆಬಿಕ್, ಸುಧೀರ್, ಸುನಿಲ್,ಶ್ರೇತ,ಸ್ಯಾಮುವೆಲ್ ಪ್ರದೀಪ್ ಕುಮಾರ್, ಸಿಸ್ಟರ್ ಡಯಾನ, ಜಪಮಾಲ, ಎಸ್.ಡಿ.ಪ್ರಸಾದ್, ಎರಿಯ ಖಜಾಂಚಿ ಸತೀಶ್,ಮೊರಸ್, ಸಂಜೀವಕುಮಾರ್, ಫಾಸ್ಟರ್ ದೇವರಾಜು ಸೇರಿದಂತೆ ಹಲವರು ಭಾಗಿಯಾಗಿದ್ದರು.


