ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ 14ನೇ ಬಜೆಟ್ ಮಂಡಿಸಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಹಣ ಮೀಸಲಿಡಲಾಗಿದೆ. ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಮುಖ್ಯಾಂಶಗಳು ಈ ಕೆಳಗಿನಂತಿವೆ.
ನಾಲ್ಕು ಗ್ಯಾರೆಂಟಿ ಯೋಜನೆಗಳ ಜಾರಿಗೆ 58,225 ಕೋಟಿ
ಗೃಹಜ್ಯೋತಿ ಯೋಜನೆಗೆ 13,950 ಕೋಟಿ
ಅನ್ನಭಾಗ್ಯ ಯೋಜನೆಗೆ 10,275 ಕೋಟಿ ರೂಪಾಯಿ
ಶಕ್ತಿ ಯೋಜನೆಗೆ 4,000 ಕೋಟಿ
ಗೃಹಲಕ್ಷ್ಮೀ ಯೋಜನೆಗೆ 30,000 ಕೋಟಿ
ಯುವನಿಧಿ ಬಿಟ್ಟು ಉಳಿದ ಯೋಜನೆಗಳಿಗೆ 58,225 ಕೋಟಿ
100 ರೈತ ಉತ್ಪಾದನಾ ಕಂಪನಿಗಳಿಗೆ ಶೇ.4ರ ಬಡ್ಡಿ ದರದಲ್ಲಿ ಸಹಾಯಧನ
ನಮ್ಮ ಮೆಟ್ರೋಗೆ 30,000 ಕೋಟಿ ಅನುದಾನ
ಆಹಾರ ಇಲಾಖೆಗೆ 10,000 ಕೋಟಿ ಅನುದಾನ
ಸಮಾಜ ಕಲ್ಯಾಣ ಇಲಾಖೆಗೆ 11,000 ಕೋಟಿ ಅನುದಾನ
ಮೈಸೂರು, ಕಲಬುರ್ಗಿಯಲ್ಲಿ ಟ್ರಾಮಾ ಸೆಂಟರ್, ಚಿತ್ರದುರ್ಗಕ್ಕೆ ವೈದ್ಯಕೀಯ ಕಾಲೇಜು ಘೋಷಣೆ
ಕೃಷಿಭಾಗ್ಯ ಯೋಜನೆಯಡಿ ನರೇಗಾ ಯೋಜನೆಗೆ 10 ಕೋಟಿ ಅನುದಾನ
ನಂದಿನಿ ಮಾದರಿಯಲ್ಲಿ ಏಕೀಕೃತ ಟ್ರಾಂಡ್ ಗೆ 10 ಕೋಟಿ ಅನುದಾನ
ಬೆಂಗಳೂರು ಅಭಿವೃದ್ಧಿಗೆ 45,000 ಕೋಟಿ ಅನುದಾನ
ಇಂದಿರಾ ಕ್ಯಾಂಟೀಣ್ ಗೆ 100 ಕೋಟಿ ಅನುದಾನ
ಕೃಷಿಭಾಗ್ಯ ಯೋಜನೆಗೆ ಮನರೇಗ ಅಡಿಯಲ್ಲಿ 100 ಕೋಟಿ ಅನುದಾನ
ಲೋಕೋಪಯೋಗಿ ಇಲಾಖೆಗೆ 10 ಸಾವಿರ ಕೋಟಿ ಅನುದಾನ
ರೈತರಿಗೆ 3 ಲಕ್ಷದಿಂದ 5 ಲಕ್ಷದವರೆಗೆ ಶೂನ್ಯ ಬಡ್ಡಿ ದರದ ಸಾಲ
ಕಿರು ಆಹಾರ ಸಂಸ್ಕರಣಾ ಉದ್ದಿಮೆಗೆ 100 ಕೋಟಿ
ಮೇಕೆದಾಟು ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ತೀರ್ಮಾನ
ಶಿಕ್ಷಣ ಕ್ಷೇತ್ರಕ್ಕೆ 37,000 ಕೋಟಿ ರೂ ಮೀಸಲು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24,000 ಕೋಟಿ ನಿಗದಿ
ಇಂಧನ ಇಲಾಖೆಗೆ 22,000 ಕೋಟಿ ಮೀಸಲು
ನೀರಾವರಿ ಕ್ಷೇತ್ರಕ್ಕೆ 19 ಸಾವಿರ ಕೋಟಿ ಮೀಸಲು
ಒಳಾಡಳಿತ ಮತ್ತು ಸಾರಿಗೆಗೆ 16 ಸಾವಿರ ಕೋಟಿ
ಕಂದಾಯ ಇಲಾಖೆಗೆ 16 ಸಾವಿರ ಕೋಟಿ ರೂ ನಿಗದಿ
ಲೋಕೋಪಯೋಗಿ ಇಲಾಖೆಗೆ 10 ಸಾವಿರ ಕೋಟಿ ರೂ ಮೀಸಲು
ಸಮಾಜ ಕಲ್ಯಾಣ ಇಲಾಖೆಗೆ 11 ಸಾವಿರ ಕೋಟಿ ರೂ ನಿಗದಿ