ಪ್ರಧಾನಿ ನರೇಂದ್ರ ಮೋದಿಯ ಅವಧಿಯಲ್ಲಿ ಗ್ಯಾಸ್ ,ಗೊಬ್ಬರ, ಆಡುಗೆ ಎಣ್ಣೆ, ಪೆಟ್ರೋಲ್, ಡಿಸೇಲ್ ಬೆಲೆಯೂ ಸೇರಿದಂತೆ ಪ್ರತಿವಸ್ತುವಿನ ಬೆಲೆ ಏರಿಕೆಯಾಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೋಪಿಸಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಹೊರವಲಯದಲ್ಲಿ ನಡೆದ ಬೃಹತ್ ಕಾಂಗ್ರೆಸ್ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕರ್ನಾಟಕದ ಬಿಜೆಪಿ ಸರ್ಕಾರ ದಿನ ಲೂಟಿ ಮಾಡುತ್ತಿದ್ದರು ನೀವು ಏಕೆ ಕಣ್ಣು ಮುಚ್ಚಿಕುಳಿತುಕೊಂಡಿರುವೆ ಮೋದಿ ಎಂದು ಛೇಡಿಸಿದರು.
ಸ್ವೀಸ್ ಬ್ಯಾಂಕ್ ನಿಂದ ಹಣ ತಂದು ಎಲ್ಲರ ಅಕೌಂಟ್ ಗಳಿಗೆ 15 ಲಕ್ಷ ರೂ ಹಾಕುವುದಾಗಿ ನೀಡಿದ ಭರವಸೆ ಹಾಗೆಯೇ ಉಳಿದಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದಿರಿ. ಅದನ್ನು ಈಡೇರಿಸಲಿಲ್ಲ. ಹೀಗಾಗಿ ಸುಳ್ಳುಗಳನ್ನೇ ಹೇಳಿಕೊಂಡು ಬಂದ ಪ್ರಧಾನಿ ನರೇಂದ್ರ ಮೋದಿಯಂಥ ವ್ಯಕ್ತಿಯನ್ನು ಇದುವರೆಗೂ ನಾನು ನೋಡಿಲ್ಲ ಎಂದು ಲೇವಡಿ ಮಾಡಿದರು.
ನಾನು ಮಾಡಿದ ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರ ರದ್ದು ಮಾಡಿದರು. ಬಿಜೆಪಿ ಜನರ ಆಶೀರ್ವಾದದಿಂದ ಆಯ್ಕೆಯಾದ ಸರ್ಕಾರವಲ್ಲ ಅನೈತಿಕ ಮಾರ್ಗದಿಂದ ಶಾಸಕರನ್ನು ಖರೀದಿ ಮಾಡಿ ಸರ್ಕಾರ ಮಾಡಿದರು, ಅಧಿಕಾರಕ್ಕೆ ಬಂದಾದ ಮೇಲೆ ಬರಿ ಲೂಟಿಗೆ ಇಳಿದರು ಎಂದು ತರಾಟೆಗೆ ತೆಗೆದುಕೊಂಡರು.