ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದು ನಾಳೆ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ತುಮಕೂರು ಜಿಲ್ಲೆಯ 3 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದು ತುಮಕೂರು ನಗರ ಕ್ಷೇತ್ರಕ್ಕೆ ಜ್ಯೋತಿ ಗಣೇಶ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ತುರುವೇಕೆರೆ ಕ್ಷೇತ್ರಕ್ಕೆ ಮಸಾಲ ಜಯರಾಂ, ತಿಪಟೂರು ಕ್ಷೇತ್ರಕ್ಕೆ ಬಿ.ಸಿ.ನಾಗೇಶ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಚಿಕ್ಕಮಗಳೂರು – ಸಿ.ಟಿ.ರವಿ
ಶೃಂಗೇರಿ – ಜೀವರಾಜ್
ಹಿರಿಯೂರು – ಪೂರ್ಣೀಮಾ
ಮೊಳಕಾಲ್ಮೂರು – ತಿಪ್ಪೇಸ್ವಾಮಿ
ಹುಬ್ಬಳ್ಳಿ-ಧಾರವಾಡ -ಅರವಿಂದ ಬೆಲ್ಲದ್
ಮೊದಲಾದವರಿಗೆ ಟಿಕೆಟ್ ದೊರೆತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಬ್ಲಿಕ್ ಟಿವಿ ವರದಿ ಮಾಡಿದೆ.