ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಬಿಜೆಪಿಯನ್ನು ಸೋಲಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಕರೆ ನೀಡಿದರು.
ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಸಮಾನ ಮನಸ್ಕರ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಇತ್ತೀಚೆಗೆ ಪರಿಸ್ಥಿತಿ ಗಂಭೀರವಾಗಿದೆ. ಲಿಂಚಿಂಗ್, ಅಜಾನ್, ಹಿಜಾಬ್ ಸೇರಿದಂತೆ ಧರ್ಮ ರಾಜಕಾರಣದಿಂದ ದ್ವೇಷ, ಕೋಮು ಸಂಘರ್ಷಗಳನ್ನು ಹುಟ್ಟುಹಾಕುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದಕ್ಷಿಣ ಭಾರತಕ್ಕೆ ಕರ್ನಾಟಕದ ಮೂಲಕ ಬಿಜೆಪಿ ಪ್ರವೇಶ ಮಾಡಿದ್ದು ಇಲ್ಲಿಂದಲೇ ಬಿಜೆಪಿ ತೊಲಗಿಸಿದರೆ, 2024ರ ಸಂಸತ್ ಚುನಾವಣೆಯಲ್ಲಿ ಬದಲಾವಣೆ ಕಾಣಲು ಸಾಧ್ಯ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಬಿಜೆಪಿಯನ್ನು ದೇಶದಲ್ಲಿ ಸೋಲಿಸಬೇಕು ಎಂದು ಸಲಹೆ ನೀಡಿದರು.
ಭಾರತ್ ಜೋಡೋ ಕಾಂಗ್ರೆಸ್ ಯಾತ್ರೆಯಾದರೂ ಹಲವಾರು ನಾಗರಿಕ ಸಂಘಟನೆಗಳು ಭಾಗವಹಿಸಿ ಮುಂದಿನ 1 ವರ್ಷದಲ್ಲಿ ಬೀದಿಗಿಳಿದು ಜನರಲ್ಲಿ ಜಾಗೃತಿ ಮೂಡಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಮತಗಳನ್ನು ಕ್ರೂಢೀಕರಿಸುವ ಭಾರತ್ ಜೋಡೋ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದು ಪ್ರಮುಖವಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಇತರೆ ಪಕ್ಷದವರೆಂದು ಗುರುತಿಸಿಕೊಂಡಿರುವ ಜನರನ್ನು ಬಿಟ್ಟು ತಟಸ್ಥವಾಗಿರುವ ನಿರ್ಧರಿತ ಮತದಾರರನ್ನು ತಲುಪಬೇಕು ಮತ್ತು ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಮಾಡಲಾಗುತ್ತದೆ ಎಂದರು.
ಸಂವಿಧಾನಕ್ಕೆ ಇಡೀ ವ್ಯವಸ್ಥೆಯೇ ವಿರುದ್ಧವಾಗುವಂತೆ ಬಿಜೆಪಿ ಮಾಡಿದ್ದು ಯಾವ ಸಂವಿಧಾನ ಸಮಾನತೆ, ಸಾಮಾಜಿಕ ನ್ಯಾಯ, ದೇಶದ ಸಾರ್ವಭೌಮತೆ ಮತ್ತು ಧರ್ಮಗಳ ಆಯ್ಕೆ, ನಾಗರಿಕ ಹಕ್ಕುಗಳನ್ನು ನೀಡದೆಯೇ ಅದಕ್ಕೆ ಸನಾತನ ನಾಜಿ ಸಿದ್ದಾಂತದಿಂದ ಅಪಾಯವಿದೆ. ಹಾಗಾಗಿ ನಾವು ಜನರ ಹೋರಾಟದ ಮೂಲಕ ಎರಡನೇ ಗಣತಂತ್ರವನ್ನು ಸಾಧಿಸಬೇಕು ಎಂದು ಹೇಳಿದರು.
ಇದೇ ವೇಳೆ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ 2023ರ ವಿಧಾನಸಭಾ ಚುನಾವಣೆಗೆ ಪೂರಕವಾಗಿ ಸಂವಿಧಾನ ಉಳಿಸಿ, ಬಹುತ್ವ ಕರ್ನಾಟಕ ರಕ್ಷಿಸಿ ನಮ್ಮ ಮತ ವಸತಿ ಹಕ್ಕಿಗಾಗಿ ಎಂಬ ಘೋಷಣೆಯೊಂದಿಗೆ ಸ್ಲಂಜನರ 12 ಪ್ರಮುಖ ಅಂಶಗಳ ಮೇಲೆ ಸ್ಲಂ ಜನರ ಪ್ರಣಾಳಿಕೆಯನ್ನು ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ಸ್ಲಂಜನಾಂದೋಲ ಕರ್ನಾಟಕ ಸಂಚಾಲಕ ಎ.ನರಸಿಂಹ ಮೂರ್ತಿ, ವಿಮರ್ಶಕ ಕೆ.ಪಿ.ನಟರಾಜ್, ನಟರಾಜಪ್ಪ, ಡಾ.ಅರುಂಧತಿ, ಡಾ. ರಂಗಸ್ವಾಮಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಬಾ.ಹ.ರಮಾಕುಮಾರಿ ಮೊದಲಾದವರು ಉಪಸ್ಥಿತರಿದ್ದರು.