Sunday, December 22, 2024
Google search engine
Homeಮುಖಪುಟಆಕಾಶವಾಣಿ ಕಾರ್ಯಕ್ರಮ ನಿರ್ವಾಹಕಿ ಸುಮಂಗಳ ನಿಧನ

ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕಿ ಸುಮಂಗಳ ನಿಧನ

ವಿಜ್ಞಾನ ಸಂವಹನಕ್ಕಾಗಿ ರಾಷ್ಟ್ರ ಪ್ರಶಸ್ತಿ ವಿಜೇತರಾದ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿದ್ದ ಸುಮಂಗಳಾ ಎಸ್ ಮುಮ್ಮಿಗಟ್ಟಿಯವರು ಇಂದು ಮುಂಜಾನೆ ನಿಧನರಾಗಿದ್ದಾರೆ.

ಸುಮಾರು 40ಕ್ಕೂ ಹೆಚ್ಚು ವಿಜ್ಞಾನದ ಕೃತಿಗಳು, ಸಾವಿರಾರು ಲೇಖನಗಳನ್ನು, ನೂರಾರು ವಿಜ್ಞಾನ ಕಾರ್ಯಕ್ರಮಗಳನ್ನು ರೂಪಿಸಿದ್ದ ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಅವುಗಳಲ್ಲಿ, ಪರಿಸರ ಪ್ರಶಸ್ತಿ ರೇಡಿಯೋ ಅಸ್ಕರ್ ಅಂತರಾಷ್ಟ್ರೀಯ ಪ್ರಶಸ್ತಿಯ ಪ್ರಮುಖವಾಗಿವೆ.

ಇತ್ತಿಚೆಗೆ ಪ್ರಕಟವಾದ ವಿಜ್ಞಾನ ತಂತ್ರಜ್ಞಾನ ದರ್ಶನ ಅವರ ಪ್ರಮುಖ ಕೃತಿಗಳಲ್ಲಿ ಒಂದಾಗಿದೆ.

ಅದ್ಬುತ ಆವಾಸ ಅಂಡಮಾನ್, ಅಲ್ಲಮ ಪ್ರಭು, ಮತ್ತಿತರ ಕೃತಿಗಳು ಅವರ ಬರವಣಿಗೆಯ ವಿಷಯ ವಿಸ್ತಾರಕ್ಕೆ ಉದಾಹರಣೆಯಾಗಿವೆ.

ಹಲವಾರು ವಿಜ್ಞಾನ ಸಂವಹನಕಾರರನ್ನು ಹುರಿದುಂಬಿಸಿ ವಿಜ್ಞಾನ ಸಂವಹನಕಾರರ ಒಂದು ಪಡೆಯನ್ನು ಕಟ್ಟಿ ಬೆಳಸಿದ ಕೀರ್ತಿ ಸುಮಂಗಳಾ ಅವರದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯಾಧ್ಯಕ್ಷ ಈ ಬಸವರಾಜು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular