ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಲೇಖಕಿಯರ ಸಂಘ ತುಮಕೂರು ಮತ್ತು ಸಿರಿವರ ಪ್ರಕಾಶನ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 26ರಂದು ಬೆಳಗ್ಗೆ 10.45ಕ್ಕೆ ಕನ್ನಡ ಭವನದಲ್ಲಿ ಮೂವರು ಲೇಖಕರ ಪುಸ್ತಕಗಳ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ.
ಕಾರ‍್ಯಕ್ರಮದಲ್ಲಿ ಎಲ್.ಎನ್.ಮುಕುಂದರಾಜ್ ವಿರಚಿತ ವಿಲೋಮಚರಿತ, ವಿಜಯ ಮೋಹನ್ ಬರೆದಿರುವ ಮೇವು ಮತ್ತು ಪ್ರೊ.ಟಿ.ಎನ್. ಜ್ಞಾನೇಶ್ವರ್ ಅವರ ಅರಿವೇ ಗುರು ಕೃತಿಗಳು ಬಿಡುಗಡೆಗೊಳ್ಳಲಿವೆ.
ಕೃತಿಗಳನ್ನು ಸಾಹಿತಿ ಎಸ್.ಗಂಗಾಧರಯ್ಯ ಬಿಡುಗಡೆ ಮಾಡಲಿದ್ದು, ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅಧ್ಯಕ್ಷತೆ ವಹಿಸುವರು.
ಕೃತಿಯ ಕುರಿತು ಪತ್ರಕರ್ತ ಉಗಮ ಶ್ರೀನಿವಾಸ್, ಚಿಂತಕ ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ, ಹಿರಿಯ ಲೇಖಕ ಡಾ.ರಾಜಶೇಖರ ಮಠಪತಿ ಮಾತನಾಡಲಿದ್ದು, ವಿಶೇಷ ಆಹ್ವಾನಿತರಾಗಿ ಡಾ.ಕರೀಗೌಡ ಬೀಚನಹಳ್ಳಿ, ಕಲೇಸಂ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಭಾಗವಹಿಸುವರು.
ವಿಶೇಷ ಆಹ್ವಾನಿತರಾಗಿ ವಿಶ್ರಾಂತ ಪ್ರಾಧ್ಯಾಪಕ ಡಾ.ಕರಿಗೌಡ, ಚಲನಚಿತ್ರ ನಿರ್ದೇಶಕ ರವೀಂದ್ರನಾಥ ಸಿರಿವರ ಆಗಮಿಸಲಿದ್ದು, ಸಿರಿವರ ಶಿವರಾಮಯ್ಯ ಗಾಯನ ನಡೆಸಿಕೊಡಲಿದ್ದಾರೆ.


