Friday, October 18, 2024
Google search engine
Homeಆರ್ಥಿಕಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗಕ್ಕೆ ಬಜೆಟ್ ನಲ್ಲಿ ಪರಿಹಾರ ಒದಗಿಸಿಲ್ಲ - ಪ್ರತಿಪಕ್ಷಗಳ ಟೀಕೆ

ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗಕ್ಕೆ ಬಜೆಟ್ ನಲ್ಲಿ ಪರಿಹಾರ ಒದಗಿಸಿಲ್ಲ – ಪ್ರತಿಪಕ್ಷಗಳ ಟೀಕೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ 2023-24ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಅಗತ್ಯ ವಸ್ತುಗಳ ಬೇಲೆ ಏರಿಕೆ, ಹಣದುಬ್ಬರ ಮತ್ತು ನಿರುದ್ಯೋಗಕ್ಕೆ ಪರಿಹಾರ ಒದಗಿಸಿಲ್ಲ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ.

ಬಜೆಟ್ ಮಂಡಿಸಿದ ಬಳಿಕ ಸಂಸತ್ ಹೊರಗಡೆ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕರಾಗಿರುವ ಗೌರವ್ ಗೊಗೊಯ್, ದೊಡ್ಡ ಉದ್ಯಮಿಗಳಿಗೆ ಮಾತ್ರ ಬಜೆಟ್ ನಿಂದ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ಪರಿಗಣಿಸಿ 7 ಲಕ್ಷ ರೂಗಳವರೆಗೆ ತೆರಿಗೆ ರಿಯಾಯಿತಿ ನೀಡಿರುವುದು ಅತ್ಯಲ್ಪವಾಗಿದೆ. ಇದು ಮಧ್ಯಮ ವರ್ಗದವರಿಗೆ ಸಾಲುವುದಿಲ್ಲ ಎಂದು ತಿಳಿಸಿದ್ದಾರೆ.

ಕೇಂದ್ರ ಬಜೆಟ್ ನಲ್ಲಿ ಉದ್ಯೋಗ ಖಾತ್ರಿ, ಬಡ ಗ್ರಾಮೀಣ ಕಾರ್ಮಿಕರು, ಉದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ ಎಂದು ಸಂಸದ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಜೆಟ್ ಹಣದುಬ್ಬರ ಮತ್ತು ನಿರುದ್ಯೋಗವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಪ್ರತಿಪಾದಿಸಿರುವ ಅಖಿಲೇಶ್ ಯಾದವ್, “ಬಿಜೆಪಿ ತನ್ನ ಬಜೆಟ್‌ನ ಒಂದು ದಶಕವನ್ನು ಪೂರ್ಣಗೊಳಿಸುತ್ತಿದೆ, ಆದರೆ ಅದು ಮೊದಲು ಸಾರ್ವಜನಿಕರಿಗೆ ಏನನ್ನೂ ನೀಡದಿದ್ದಾಗ, ಅದು ಈಗ ಏನು ನೀಡುತ್ತದೆ? ಈ ಬಜೆಟ್ ಕೆಲವೇ ಶ್ರೀಮಂತರ ಲಾಭಕ್ಕಾಗಿ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಬಿಎಸ್.ಪಿ ಮುಖ್ಯಸ್ಥೆ ಮಾಯವತಿ ಟ್ವೀಟ್ ಮಾಡಿ ಬಜೆಟ್ವ ದೇಶದಲ್ಲಿ ಹಿಂದಿನಂತೆ, ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಬಜೆಟ್‌ಗಳು ಬರುತ್ತಲೇ ಇರುತ್ತವೆ, ಅದರಲ್ಲಿ ಘೋಷಣೆಗಳು, ಭರವಸೆಗಳು, ಹಕ್ಕುಗಳು ಮತ್ತು ಭರವಸೆಗಳು ಸುರಿಯುತ್ತಿವೆ. ಭಾರತದ ಮಧ್ಯಮ ವರ್ಗವು ಹಣದುಬ್ಬರ, ಬಡತನ ಮತ್ತು ನಿರುದ್ಯೋಗ ಇತ್ಯಾದಿ ಸಮಸ್ಯೆಗಳನ್ನು ಎದುರಿಸಿದಾಗ ಮತ್ತು ಕೆಳ ಮಧ್ಯಮ ವರ್ಗಕ್ಕೆ ಇಳಿಸಲ್ಪಟ್ಟಾಗ ಅವರೆಲ್ಲರೂ ಅನಗತ್ಯವಾದುದು ಎಂದು ಟೀಕಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular