ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸಿದ್ದಕ್ಕಾಗಿ ಬಂಧಿತರಾಗಿರುವ ಹದಿಮೂರು ವಿದ್ಯಾರ್ಥಿಗಲನ್ನು ಪೊಲೀಸರು ಇದುವರೆಗೂ ಬಿಡುಗಡೆ ಮಾಡಿಲ್ಲ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಹೇಳಿದೆ.
ಇಂಡಿಯಾ:ಮೋದಿ ಪ್ರಶ್ನೆ ಶೀರ್ಷಿಕೆಯ ಸಾಕ್ಷ್ಯಚಿತ್ರದ ಲಿಂಕ್ ಗಳನ್ನು ನಿರ್ಬಂಧಿಸಲು ಸರ್ಕಾರವು ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಿಗೆ ನಿರ್ದೇಶನ ನೀಡಿತ್ತು.
ಸಾಕ್ಷ್ಯಚಿತ್ರದ ಪ್ರಸ್ತಾವಿತ ಪ್ರದರ್ಶನಕ್ಕೆ ಗಂಟೆಗಳ ಮೊದಲು ನಾಲ್ವರು ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ ಸದಸ್ಯರ ಬಂಧನದ ವಿರುದ್ದ ಪ್ರತಿಭಟಿಸಲು ವಿಶ್ವವಿದ್ಯಾಲಯದ ಗೇಟ್ ನ ಹೊರಗೆ ಜಮಾಯಿಸಿದ ನೂರಾರು ವಿದ್ಯಾರ್ಥಿಗಳನ್ನು ಬುಧವಾರ ಬಂಧಿಸಲಾಯಿತು.
ಬಂಧಿತ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರನ್ನು ಬುಧವಾರ ಸಂಜೆ ಪೊಲೀಸರು ಬಿಡುಗಡೆ ಮಾಡಿದರೆ 13 ಮಂದಿ ವಿದ್ಯಾರ್ಥಿಗಳನ್ನು ಇನ್ನು ಬಿಡುಗಡೆ ಮಾಡದೇ ಬಂಧನದಲ್ಲಿರಿಸಲಾಗಿದೆ ಎಂದು ಎಸ್.ಎಫ್.ಐ ಹೇಳಿದೆ.