Friday, November 22, 2024
Google search engine
Homeಮುಖಪುಟಬಿಜೆಪಿ, ಕಾಂಗ್ರೆಸ್ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ - ಸಿದ್ದರಾಮಯ್ಯ

ಬಿಜೆಪಿ, ಕಾಂಗ್ರೆಸ್ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ – ಸಿದ್ದರಾಮಯ್ಯ

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ಮೇಲಿನ‌ ಆರೋಪಗಳ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಆಯೋಗದ ಮೂಲಕ ತನಿಖೆಯಾಗಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ‌ ವಿರುದ್ಧದ ಎಂಟು ಆರೋಪಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ನಾನು ಹೆದರಿರಲಿಲ್ಲ. ಆ ತಾಖತ್ ಬಿಜೆಪಿಗೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ.

ಡಿ.ಕೆ.ರವಿ ಮತ್ತು ಗಣಪತಿ ಅವರ ಅತ್ಮಹತ್ಯೆ ಬಗ್ಗೆ ಕತೆ ಕಟ್ಟಿ ಆರೋಪ ಮಾಡಿದ್ದರಲ್ಲಾ ಏನಾಯ್ತು? ಪರೇಸ್ ಮೇಸ್ತಾ ಸಾವನ್ನು ಬಳಸಿಕೊಂಡು ಕೋಮುಗಲಭೆ ನಡೆಸಿದ್ದರಲ್ಲಾ ಏನಾಯ್ತು? ಸಿಬಿಐ ಈ ಆರೋಪಗಳನ್ನೆಲ್ಲ ತಿರಸ್ಕರಿಸಿತ್ತಲ್ಲಾ? ಬಿಜೆಪಿ ನಾಯಕರಿಗೆ ಇದಕ್ಕಿಂತ ದೊಡ್ಡ ಮುಖಭಂಗ ಏನಿದೆ? ಎಂದು ಕೇಳಿದ್ದಾರೆ.

ಚುನಾವಣೆಯ ಹೊಸ್ತಿಲಲ್ಲಿ ನಮ್ಮ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿಯ ಸಚಿವರು ಮೂರು ಮುಕ್ಕಾಲು ವರ್ಷ ಏನು ಮಾಡುತ್ತಿದ್ದರು? ಕತ್ತೆ ಕಾಯುತ್ತಿದ್ರಾ? ನಮ್ಮ ಸರ್ಕಾರದ ವಿರುದ್ಧದ ಆರೋಪಗಳ ತನಿಖೆ ನಡೆಸಿದ್ದ ಸಿಬಿಐ, ಬಹುತೇಕ ಎಲ್ಲ‌ ಪ್ರಕರಣಗಳಲ್ಲಿ ನಮ್ಮನ್ನು ದೋಷಮುಕ್ತಗೊಳಿಸಿತ್ತು ಎಂದು ಹೇಳಿದ್ದಾರೆ.

ಬಿಜೆಪಿ ಸಚಿವರು ನಮ್ಮ ಸರ್ಕಾರದ ವಿರುದ್ಧ ಹುಡುಕಾಡಿ, ಹುಡುಕಾಡಿ ಆರೋಪಗಳನ್ನು ಮಾಡುತ್ತಿದ್ದಾರಲ್ಲಾ, ಅವುಗಳಲ್ಲಿ ಬಹಳಷ್ಟು ಪ್ರಕರಣಗಳ ತನಿಖೆ ನಡೆಸಿ ಕೈಬಿಡಲಾಗಿದೆ. ಇವೆಲ್ಲ ಗೊತ್ತಿದ್ದರೂ ತಮ್ಮ ವಿರುದ್ಧದ ಆರೋಪಗಳನ್ನು ಮುಚ್ಚಿಹಾಕಲು ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ವೈಟ್ ಟಾಪಿಂಗ್ ಯೋಜನೆಯಲ್ಲಿ ಅವ್ಯವಹಾರ ನಡೆದಿತ್ತು ಎಂದು ಡಾ.ಸುಧಾಕರ್ ಆರೋಪಿಸಿದ್ದಾರೆ. ಆದರೆ 2019 ರಲ್ಲಿ ಕೇಂದ್ರ ಸರ್ಕಾರದ ಗುಣಮಟ್ಟ ಪರಿಶೀಲನಾ ಘಟಕದ ನಿವೃತ್ತ ಚೀಫ್ ಎಂಜನಿಯರ್ ಕ್ಯಾಪ್ಟನ್ ದೊಡ್ಡಿಹಾಳ್ ಅಧ್ಯಕ್ಷತೆಯ ಸಮಿತಿ ಅಧ್ಯಯನ ನಡೆಸಿ ಅವ್ಯವಹಾರ ಆಗಿಲ್ಲ ಎಂದು ವರದಿ ನೀಡಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ಅವರನ್ನೇ ಸುಧಾಕರ್ ಕೇಳಿದರೆ ಸರಿಯಾದ ಮಾಹಿತಿ ಕೊಡಬಹುದು. ಅವರ ಕಾಲದಲ್ಲಿಯೇ ಸಮಿತಿ ರಚನೆಯಾಗಿದ್ದು ಮತ್ತು ಸಮಿತಿ ವರದಿ ನೀಡಿದ್ದು ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular