ತುಮಕೂರು ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಜೀಪು ಚಾಲಕ ದೇವರಾಜು, ಶಿಕ್ಷಕ ಪದ್ಮರಾಜ್ ಅವರಿಗೆ ಜಾತಿ ನಿಂದನೆ ಮಾಡಿ, ಅನುಚಿತವಾಗಿ ನಡೆದುಕೊಂಡಿರುವ ಹಿನ್ನೆಲೆಯಲ್ಲಿ ತುಮಕೂರು ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತುಮಕೂರು ತಾಲ್ಲೂಕು ಬಿಇಒ ಕಚೇರಿಗೆ ಕೆಲಸದ ನಿಮಿತ್ತ ಜನವರಿ 16ರಂದು 2023ರಂದು ಬಂದಿದ್ದೆ. ಈ ಸಮಯದಲ್ಲಿ ಸಹಶಿಕ್ಷಕರೊಂದಿಗೆ ಮಾತನಾಡುತ್ತಿದ್ದೆ. ಆಗ ಅಲ್ಲಿಗೆ ಬಂದ ಬಿಇಒ ಜೀಪು ಚಾಲಕ ದೇವರಾಜು ನನಗೆ ಜಾತಿ ನಿಂದನೆ ಮಾಡಿದರು. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದರು ಎಂದು ಶಿಕ್ಷಕ ಹಾಗೂ ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಆಗಿರುವ ಪದ್ಮರಾಜ್ ಆರೋಪಿಸಿದ್ದಾರೆ.
ಈ ಬಗ್ಗೆ ಬಿಇಓ ಹನುಮನಾಯ್ಕ್ ಅವರಿಗೆ ಕ್ರಮಕ್ಕೆ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದೆ. ಆರೋಪಿ ದೇವರಾಜ ಅಲ್ಲಿಯೇ ಇದ್ದರೂ ಕರೆದು ಬುದ್ದಿ ಹೇಳದೆ ಬಿಇಒ ನಿರ್ಲಕ್ಷ್ಯ ವಹಿಸಿದರು ಎಂದು ಪದ್ಮರಾಜು ಆರೋಪಿಸಿದ್ದಾರೆ.
ನಂತರ ದಲಿತ ಸಂಘಟನೆಗಳ ಮುಖಂಡರೊಂದಿಗೆ ನಗರ ಠಾಣೆಗೆ ಹೋಗಿ ಜಾತಿ ನಿಂದನೆ ಮಾಡಿರುವ ದೇವರಾಜ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮನವಿ ಮಾಡಿದೆ. ಆದ್ದರಿಂದ ದೇವರಾಜು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಸುಪ್ರೀಂಕೋರ್ಟ್ ಜಾತಿ ನಿಂದನೆ ಪ್ರಕರಣಗಳಲ್ಲಿ ತೀರ್ಪು ನೀಡಿದ್ದು ಜಾತಿ ನಿಂದನೆ ಪ್ರಕರಣಗಳು ಬಂದ ಕೂಡಲೇ ಎಫ್ಐಆರ್ ದಾಖಲಿ ಆರೋಪಿಯನ್ನು ಬಂಧಿಸಬೇಕು ಮತ್ತು ಶೀಘ್ರಗತಿಯಲ್ಲಿ ತನಿಖೆಯನ್ನು ಕೈಗೊಳ್ಳಬೇಕು ಎಂಬ ನಿಯಮವಿದೆ. ಆದರೂ ಸಹ ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿಲ್ಲ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ
ಈ ಹಿಂದೆ ಶಿಕ್ಷಕಿಯರೊಂದಿಗೆ ಬಿಇಒ ಕಾರು ಚಾಲಕ ದೇವರಾಜು ಅನುಚಿತವಾಗಿ ವರ್ತನೆ ಮಾಡಿದ್ದಕ್ಕಾಗಿ ಜಯನಗರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ದೇವರಾಜು ಅವರಿಗೆ ಬುದ್ದಿ ಹೇಳುವಂತೆ ಸೂಚಿಸಲಾಗಿತ್ತು. ಆದರೂ ಸಹ ಆರೋಪಿಯು ತನ್ನ ತಪ್ಪುಗಳನ್ನು ತಿದ್ದಿಕೊಂಡಿಲ್ಲ ಎಂದು ದಲಿತ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.