ದೆಹಲಿ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕಸೇವಾ ಆಯೋಗವನ್ನು ಹೊಂದುವಂತಿಲ್ಲ ಎಂಬ ಕೇಂದ್ರದ ಸಲ್ಲಿಕೆಯನ್ನು ಸುಪ್ರೀಂಕೋರ್ಟ್ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಅಪಾಯಕಾರಿ ಎಂದು ಬಣ್ಣಿಸಿದೆ.
ದೆಹಲಿಯು ಜಮ್ಮು ಮತ್ತು ಕಾಶ್ಮೀರದಂತಹ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕಸೇವಾ ಆಯೋಗವನ್ನು ಏಕೆ ಹೊಂದಲು ಸಾಧ್ಯವಿಲ್ಲ ಎಂಬ ಪ್ರಶ್ನೆಯನ್ನು ಮುಂದಿಟ್ಟ ಪೀಠವು ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕಸೇವಾ ಆಯೋಗವನ್ನು ಹೊಂದಿರುವಾಗ ಇತರ ಯುಟಿಗಳು ಏಕೆ ಹೊಂದಬಾರದು ? ದೆಹಲಿ ಪಿಎಸ್ ಸಿ ಹೊಂದಲು ಸಾಧ್ಯವಿಲ್ಲ ಎಂಬ ನಿಮ್ಮ ವಾದ ತುಂಬಾ ಅಪಾಯಕಾರಿ ಎಂದು ಹೇಳಿದೆ.
ದಕ್ಷ ಅಧಿಕಾರಿಗಳನ್ನು ವರ್ಗಾಯಿಸಲು ಜಿಎಸ್.ಸಿಟಿಡಿ ಮೇಲಿನ ನಿರ್ಬಂಧವು ಜಿಎನ್.ಸಿ.ಟಿ.ಡಿಯ ಕ್ರಿಯಾತ್ಮಕ ನಿಯಂತ್ರಣವನ್ನು ದುರ್ಬಲಗೊಳಿಸುತ್ತದೆಯೇ ಎಂದು ಪೀಠ ಕೇಳಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ನಾವು ಇನ್ನೂ ಒಂದು ವಿಷಯವನ್ನು ಸೂಚಿಸಲು ಬಯಸುತ್ತೇವೆ. ಅಧಿಕಾರಿಯೊಬ್ಬರು ತೃಪ್ತಿಕರವಾಗಿ ಕಾರ್ಯನಿರ್ವಹಿಸದಿದ್ದರೆ ಅವರು ಅಧಿಕಾರಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಇದು ಕಾರ್ಯಕಾರಿ ನಿಯಂತ್ರವನ್ನು ದುರ್ಬಲಗೊಳಿಸುವುದಿಲ್ಲವೇ? ಎಂದು ಪೀಠ ಕೇಳಿದೆ.