Monday, December 23, 2024
Google search engine
Homeಮುಖಪುಟಇಂದು ಸ್ಯಾಂಟ್ರೋ ರವಿ ಬಂಧನ, ನಾಳೆ ಸಿ.ಟಿ.ರವಿ ಬಂಧನ - ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಅಚ್ಚರಿಕೆ...

ಇಂದು ಸ್ಯಾಂಟ್ರೋ ರವಿ ಬಂಧನ, ನಾಳೆ ಸಿ.ಟಿ.ರವಿ ಬಂಧನ – ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಅಚ್ಚರಿಕೆ ಹೇಳಿಕೆ

ಈಗ ಸ್ಯಾಂಟ್ರೋ ರವಿ ಅರೆಸ್ಟ್ ಆಗಿದ್ದಾನೆ. ನಾಳೆ ಸಿ.ಟಿ.ರವಿ ಅರೆಸ್ಟ್ ಆಗುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿಗೂ ಸಿ.ಟಿ.ರವಿಗೂ ಏನೂ ವ್ಯತ್ಯಾಸವಿಲ್ಲ. ಇಂದು ಸ್ಯಾಂಟ್ರೋ ರವಿ ಅರೆಸ್ಟ್ ಆಗಿದ್ದಾನೆ. ನಾಳೆ ಸಿ.ಟಿ.ರವಿ ಆರೆಸ್ಟ್ ಆಗುತ್ತಾರೆ. ನನ್ನ ಮೇಲೂ ಮಾನನಷ್ಟ ಮೊಕದ್ದಮೆ ಹಾಕಿದರೆ ಹಾಕಲಿ. ನಾವೇನು ಹೆದರಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ನ್ಯಾಯಾಲಯದಲ್ಲಿ ಆತನ ಆಸ್ತಿ ಎಷ್ಟಿದೆ ? ಏನು ಎಂಬುದು ಗೊತ್ತಾಗಲಿದೆ. ಬಿಜೆಪಿ ವಿರುದ್ದ ಮಾತನಾಡಿದರೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ ಎಂದರು.

ಸಿ.ಪಿ. ಯೋಗೇಶ್ವರ್ ಆಡಿಯೋ ವಿಚಾರದ ಕುರಿತು ಮಾತನಾಡಿದ ಅವರು, ಈ ಬಾರಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಜನಾದೇಶ ಬರಲ್ಲ ಎಂದು ಯೋಗೇಶ್ವರ್ ಹೇಳಿದ್ದಾರೆ. ಹಳೇ ಮೈಸೂರು ಪ್ರಾಂತ್ಯದಲ್ಲಿ 20ಕ್ಕೂ ಹೆಚ್ಚು ಮಂದಿ ಸೇರಿಸಿಕೊಳ್ಳುತ್ತೇವೆ ಎಂದು ಆಡಿಯೋನಲ್ಲಿ ಹೇಳಿದ್ದಾರೆ.

ಅಮಿತ್ ಶಾ ಅವರೇ ಇದಕ್ಕೆಲ್ಲ ರೂವಾರಿ ಹಾಗೂ ಆತ ಒಬ್ಬ ರೌಡಿ ಎಂದು ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಹೇಳಿದ್ದಾರೆ. ಇಲ್ಲಿಯವರೆಗೂ ಬಿಜೆಪಿ ನಾಯಕರು ಯಾಕೆ ಸ್ಪಷ್ಟನೆ ಕೊಟ್ಟಿಲ್ಲ ಎಂದು ಕೇಳಿದರು.

ಅಮಿತ್ ಶಾ ತಿಹಾರ್ ಜೈಲಿನಲ್ಲಿದ್ದರು. ಸಕ್ರಿಯ ರಾಜಕಾರಣಿಯಾಗುವ ಮುನ್ನ ಆತ ರೌಡಿ ಶೀಟರ್ ಆಗಿದ್ದವರು ಎಂದು ಸಿಪಿ ಯೋಗೇಶ್ವರ್ ಅವರೇ ಹೇಳಿದ್ದಾರೆ. ಸಿ ಪಿ ಯೋಗೇಶ್ವರ್ ಸತ್ಯವನ್ನು ಹೇಳಿದ್ದಾರೆ. ಮುಂಚಿತವಾಗಿ ಅಪೇರೇಷನ್ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯ. ಚುನಾವಣಾ ಆಯೋಗ ಈ ಬಗ್ಗೆ ಗಮನ ವಹಿಸಬೇಕು. ಸುಮೋಟೋ ಕೇಸ್ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಹಳೇ ಮೈಸೂರು ಭಾಗದಲ್ಲಿ 20ಮಂದಿ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ. ಈ ಪೈಕಿ ಮೈಸೂರಿನಲ್ಲಿ ಒಬ್ಬ ಹಾಗೂ ಕೋಲಾರದಲ್ಲಿ ಒಬ್ಬ ಕಾಂಗ್ರೆಸ್ ಮುಖಂಡನು ಸೇರುತ್ತಾನೆ ಎಂದು ಯೋಗೇಶ್ವರ್ ಹೇಳಿದ್ದಾರೆ. ಮೈಸೂರು ಭಾಗದಲ್ಲಿ ಜೆಡಿಎಸ್ ಶಾಸಕ ಸಾರಾ ಮಹೇಶ್, ಅಶ್ವಿನ್ ಕುಮಾರ್ ಜೊತೆ 20 ಮಂದಿ ಸೋಲುತ್ತಾರೆ ಎಂದು ಹೇಳಿದ್ದಾರೆ. ಬಿಜೆಪಿ ಸರ್ವೆ ನಿಜಾಂಶವನ್ನು ಸಿ ಪಿ ಯೋಗೇಶ್ವರ್ ತಿಳಿಸಿದ್ದಾರೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular