ಭಾರತ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದ ಪಂಜಾಬ್ ನ ಜಲಂಧರ್ ಲೋಕಸಭಾ ಸದಸ್ಯ ಚೌಧರಿ ಸಂತೋಕ್ ಸಿಂಗ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಎಐಸಿಸಿ ನಾಯಕ ರಾಹುಲ್ ನೇತೃತ್ವದ ಭಾರತ ಜೋಡೋ ಯಾತ್ರೆ ಇದೀಗ ಫಿಲ್ಲೌರ್ ಸಾಗುತ್ತಿದ್ದು ಚೌಧರಿ ಸಂತೋಕ್ ಸಿಂಗ್ ಯಾತ್ರೆಯಲ್ಲಿ ಭಾಗಿಯಾಗಿದ್ದರು.
ಚೌಧರಿ ಸಂತೋಕ್ ಸಿಂಗ್ ಅವರನ್ನು ಫಗ್ವಾರದ ವಿರ್ಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚೌದರಿ ಅವರು ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಚೌದರಿ ಅವರ ಅಕಾಲಿಕ ಮರಣದಿಂದ ನಾನು ದುಃಖಿತನಾಗಿದ್ದೇವೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಂತಾಪ ವ್ಯಕ್ತಪಡಿಸಿದ್ದಾರೆ.


