Saturday, October 19, 2024
Google search engine
Homeಮುಖಪುಟಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 8 ಮಂದಿ ಸಾವು - ತನಿಖೆಗೆ ಎನ್ಎಚ್ಆರ್.ಸಿ ನಿರ್ಧಾರ

ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 8 ಮಂದಿ ಸಾವು – ತನಿಖೆಗೆ ಎನ್ಎಚ್ಆರ್.ಸಿ ನಿರ್ಧಾರ

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಬಿಹಾರದ ನಕಲಿ ಮದ್ಯ ಸೇವಿಸಿ 8 ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಈ ದುರಂತದ ಕುರಿತು ಸ್ಥಳದಲ್ಲೇ ತನಿಖೆ ನಡೆಸಲು ತನ್ನದೇ ತನಿಖಾ ತಂಡವನ್ನು ನಿಯೋಜಿಸಲು ನಿರ್ಧರಿಸಿದೆ.

ಬಿಹಾರದ ಎರಡು ಜಿಲ್ಲೆಗಳಲ್ಲಿ ನಕಲಿ ಮದ್ಯ ಸೇವಿಸಿ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ. ಸರನ್ ಗೆ ಹೊಂದಿಕೊಂಡಿರುವ ಸಿವಾನ್ ಜಿಲ್ಲೆಯಲ್ಲಿ ಆರು ಮಂದಿ ಮೃತಪಟ್ಟರೆ, ಬೇಗುಸರಾಯ್ ಇನ್ನೆರಡು ಸಾವಿಗೆ ಸಾಕ್ಷಿಯಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಸರನ್ ಜಿಲ್ಲೆಯಲ್ಲಿ ಅಕ್ರಮವಾಗಿ ತಯಾರಿಸಿದ ಹಳ್ಳಿಗಾಡಿನ ಮದ್ಯವನ್ನು ಸೇವಿಸಿ ಇದುವರೆಗೆ 60 ಮಂದಿ ಸಾವನ್ನಪ್ಪಿಸಿದ್ದಾರೆ ಎಂದು ದೃಢೀಕರಿಸದ ವರದಿಗಳು ಹೇಳಿವೆ. ಆದರೆ ಅಧಿಕಾರಿಗಳು ಒಟ್ಟು 30 ಎಂದು ಅಂದಾಜಿಸಿದ್ದಾರೆ.

ಬಿಹಾರದ ಕಳಪೆ ಮದ್ಯ ಸೇವನೆ ದುರಂತದಲ್ಲಿ ಹೆಚ್ಚಿನ ಸಾವುಗಳ ಇತರ ಜಿಲ್ಲೆಗಳಿಗೆ ಹರಡುತ್ತಿರುವ ಬಗ್ಗೆ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಎನ್ಎಚ್ಆರ್.ಸಿ ತನ್ನದೇ ಆದ ತನಿಖಾ ತಂಡವನ್ನು ತನ್ನ ಸದಸ್ಯರೊಬ್ಬರ ನೇತೃತ್ವದಲ್ಲಿ ಸ್ಥಳದಲ್ಲೇ ವಿಚಾರಣೆಗೆ ನಿಯೋಜಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ.

ಈ ಸಂತ್ರಸ್ತರಿಗೆ ಎಲ್ಲಿ ಮತ್ತು ಯಾವ ರೀತಿಯ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ ಎಂಬುದನ್ನು ಆಯೋಗವು ತಿಳಿಯಲು ಬಯಸುತ್ತದೆ. ಅವರಲ್ಲಿ ಹೆಚ್ಚಿನವರು ಬಡ ಕುಟುಂಬದವರು ಮತ್ತು ಬಹುಶ:ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ.

ಆದ್ದರಿಂದ ರಾಜ್ಯ ಸರ್ಕಾರದ ಕಡೆಯಿಂದ ಅವರಿಗೆ ಸಾಧ್ಯವಾದಷ್ಟು ಉತ್ತಮವಾಧ ವೈದ್ಯಕೀಯ ಚಿಕಿತ್ಸೆ ಲಭ್ಯವಿರುವಲ್ಲಿ ಒದಗಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular