Friday, October 18, 2024
Google search engine
Homeಮುಖಪುಟಪ್ರಾಧ್ಯಾಪಕರೊಬ್ಬರ ಪ್ರೊಪಗಂಡಾಗಳಿಗೆ ಅನುಮತಿ ನೀಡದಿರುವುದೇ ಕುಲಸಚಿವ ಪ್ರೊ.ಶಿವಚಿತ್ತಪ್ಪ ಎತ್ತಂಗಡಿಗೆ ಕಾರಣ!

ಪ್ರಾಧ್ಯಾಪಕರೊಬ್ಬರ ಪ್ರೊಪಗಂಡಾಗಳಿಗೆ ಅನುಮತಿ ನೀಡದಿರುವುದೇ ಕುಲಸಚಿವ ಪ್ರೊ.ಶಿವಚಿತ್ತಪ್ಪ ಎತ್ತಂಗಡಿಗೆ ಕಾರಣ!

ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ಆ ಮೂರು ಪ್ರೊಪಗಂಡಾಗಳನ್ನು ಅನುಷ್ಟಾನಕ್ಕೆ ತರಲು ನಿರಾಕರಿಸಿದ್ದರಿಂದ ಕುಲಸಚಿವ ಪ್ರೊ.ಶಿವಚಿತ್ತಪ್ಪ ಅವರ ವರ್ಗಾವಣೆಗೆ ಸಂಚು ನಡೆದಿದೆ ಎಂದು ವಿವಿ ಮೂಲಗಳು ತಿಳಿಸಿವೆ.

ತುಮಕೂರು ವಿಶ್ವವಿದ್ಯಾಲಯವೂ ಸೇರಿದಂತೆ ರಾಜ್ಯದ ಎಲ್ಲ ವಿವಿಗಳಲ್ಲೂ ಗುಂಪುಗಾರಿಗೆ, ರಾಜಕೀಯ ಪಕ್ಷಗಳ ಪರ ನಿಲುವು ಹೊಂದಿ ಯಾವ ರಾಜಕಾರಣಿಗಳಿಗೂ ಕಡಿಮೆ ಇಲ್ಲದಂತೆ ರಾಜಕೀಯ ಮಾಡುವುದು ಸಾಮಾನ್ಯವಾಗಿದೆ.

ತುಮಕೂರು ವಿವಿಯಲ್ಲಿ ಹಲವು ಗುಂಪುಗಳಿದ್ದು ಕುಲಸಚಿವ ಶಿವಚಿತ್ತಪ್ಪ ವಿರುದ್ಧ ಒಂದು ಗುಂಪು ತಂತ್ರಗಳನ್ನು ಎಣೆಯುತ್ತಿದ್ದು ಅವರ ಎತ್ತಂಗಡಿಯಲ್ಲಿ ಶಿರಸಾ ವಹಿಸಿ ಕೆಲಸ ಮಾಡಿವೆ ಎನ್ನಲಾಗಿದೆ.

ಆ ಪ್ರಾಧ್ಯಾಪಕರು ಶಿವಚಿತ್ತಪ್ಪ ಅವರನ್ನು ಎತ್ತಂಗಡಿ ಮಾಡಿಸಲು ಇನ್ನಿಲ್ಲದ ರಾಜಕೀಯ ಮಾಡಿ ಯಶಸ್ವಿಯಾಗಿದ್ದಾರೆ.

ಇದೇ ವೇಳೆ ಡಿಸೆಂಬರ್ 8ರಂದು ನನ್ನ ಸಾಹಿತ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಜಿಜ್ಞಾಸೆ ಕಾರ್ಯಕ್ರಮವನ್ನು ತುಮಕೂರು ವಿವಿಯಲ್ಲಿ ಆಯೋಜಿಸಲಾಗಿತ್ತು.

ಆಗ ಶಿವಚಿತ್ತಪ್ಪ ಅವರು ಕೊರಟಗೆರೆ ಮಹಿಳಾ ತಹಶೀಲ್ದಾರ್ ವಿರುದ್ಧ ಲಘುವಾಗಿ ಮಾತನಾಡಿದರು ಎಂದು ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಸುದ್ದಿ ಬರುವಂತೆ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ. ಶಿವಚಿತ್ತಪ್ಪ ಅವರು ಹಾಗೆ ಮಾತನಾಡದಿದ್ದರೂ, ತಹಶೀಲ್ದಾರ್ ಒಬ್ಬರನ್ನು ಹೀಗಳೆಯುವ ಮಾತನಾಡದಿದ್ದರೂ ತಹಶೀಲ್ದಾರ್ ವಿರುದ್ಧ ಲಘುವಾಗಿ ಮಾತನಾಡಿದ್ದಾರೆ ಎಂಬಂತೆ ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಬರೆಸಲಾಗಿದೆ.

ಹೀಗೆ ಪತ್ರಿಕೆಯಲ್ಲಿ ಸುದ್ಧಿ ಪ್ರಕಟವಾಗುವಂತೆ ನೋಡಿಕೊಂಡ ಆ ಪ್ರಾಧ್ಯಪಕರು ತನ್ನ ಮೂರು ಪ್ರೊಪಗಾಂಡಗಳನ್ನು ಜಾರಿಗೊಳಿಸಲು ನಿರಾಕರಿಸಿದ ಪ್ರೊ.ಶಿವಚಿತ್ತಪ್ಪ ವಿರುದ್ಧ ಪತ್ರಿಕೆಯಲ್ಲಿ ಸುದ್ದಿ ಬರುವಂತೆಯೂ ನೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಿವಿಯಲ್ಲಿ ಹಿಂದುಳಿದ ವರ್ಗದ ಕುಲಸಚಿವರೊಬ್ಬರು ಅಧಿಕಾರದಲ್ಲಿರಬಾರದು ಎಂದು ಪಿತೂರಿ ನಡೆಸಿ ಶಿವಚಿತ್ತಪ್ಪ ವರ್ಗಾವಣೆಗೆ ರಾಜಕಾರಣಿಗಳ ಮೇಲೆ ಒತ್ತಡ ತಂದು ವರ್ಗಾವಣೆಯಾಗುವಂತೆ ನೋಡಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular