ಎನ್.ಡಿ.ಟಿವಿ ಸಂಸ್ಥಾಪಕರು ಮತ್ತು ಪ್ರವರ್ತಕರಾದ ಪ್ರಣಯ್ ರಾವ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಆರ್.ಆರ್.ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ ಎಂದು ಕಂಪನಿ ತಿಳಿಸಿದೆ.
ಎನ್.ಡಿ.ಟಿವಿಯ ಪ್ರವರ್ತಕ ಸಮೂಹದ ವಾಹನವಾದ ಆರ್.ಆರ್.ಪಿಆರ್ ಹೋಲ್ಡಿಂಗ್ ಎನ್.ಡಿಟಿವಿ ಶೇ.29.18 ಪಾಲನ್ನು ಹೊಂದಿದೆ. ಇದನ್ನು ಉದ್ಯಮಿ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹವು ಸ್ವಾಧೀನಪಡಿಸಿಕೊಂಡಿದೆ.
ಮಂಗಳವಾರ ಪತ್ರವೊಂದರಲ್ಲಿ ಎನ್.ಡಿ.ಟಿವಿ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಗೆ, ಎನ್.ಡಿ.ಟಿವಿಗೆ ಪ್ರಮೋಟರ್ ಗ್ರೂಪ್ ವೆಹಿಕಲ್ ಆರ್. ಆರ್.ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ತಿಳಿಸಿದ್ದು, ನಿನ್ನೆ ನಡೆದ ಸಭೆಯಲ್ಲಿ ನಿರ್ದೇಶಕರ ಮಂಡಳಿಯು ನವೆಂಬರ್ 29ರಂದು ಅನುಮೋದಿಸಿದೆ.
ಆರ್.ಆರ್.ಪಿಆರ್ ಮಂಡಳಿಯಲ್ಲಿ ನಿರ್ದೇಶಕರಾಗಿ ಸುದೀಪ್ತ ಭಟ್ಟಾಚಾರ್ಯ, ಸಂಜಯ್ ಪುಗಾಲಿಯಾ, ಸೆಂಥಿಲ್ ಸಿನ್ನಯ್ಯ ಚೆಂಗಲ್ವರಾಯನ್ ನವೆಂಬರ್ 29ರಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.
ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಆರ್.ಆರ್.ಪಿಆರ್ ನಿರ್ದೇಶಕ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕವೂ ಅವರು ಎನ್.ಡಿ.ಟಿವಿಯ ಮೇಲೆ ಹಿಡಿತವನ್ನು ಹೊಂದಿದ್ದಾರೆ.