ಅಸ್ಸಾಂನಲ್ಲಿ ನಡೆದ 22ನೇ ರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಲ್ಲಿ ದಾವಣಗೆರೆ ನಗರದ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿ ಗಗನ ನಾಯಕ ಅವರು ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಕರ್ನಾಟಕ ರಾಜ್ಯ ತಂಡದಿಂದ ಪಾಲ್ಗೊಂಡು 50 ಮೀಟರ್ ಬ್ಯಾಕ್ ಸ್ಕ್ರೋಕ್ ನಲ್ಲಿ ಗೋಲ್ಡ್, 100 ಮೀಟರ್ ಬ್ಯಾಕ್ ಸ್ಟ್ರೋಕ್ ಬಂಗಾರದ ಪದಕ, 50 ಫ್ರೀ ಸ್ಟ್ರೈಲ್ ನಲ್ಲಿ ಬಂಗಾರದ ಪದಕ ಜಯ ಗಳಿಸುವ ಮೂಲಕ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಹಾಗೂ ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ.
ಗಗನ್ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುವಂತಾಗಲಿ ಎಂದು ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ತರಬೇತುದಾರ ಅರ್ಜುನ್ ಪ್ರಶಸ್ತಿ ವಿಜೇತ ಶರತ್ ಗಾಯಕೋಡ್, ಸಿದ್ದಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥ ಜಸ್ಟಿಸ್ ಡಿಸೋಜಾ ಮೊದಲಾದವರು ಗಗನ ನಾಯಕರಿಗೆ ಶುಭ ಕೋರಿದ್ದಾರೆ.