Sunday, September 8, 2024
Google search engine
Homeಮುಖಪುಟರಾಜಭವನ ಮುತ್ತಿಗೆ - ಟಿಆರ್.ಎಸ್ ಕಾರ್ಯಕರ್ತರಿಂದ ವೈಎಸ್ಆರ್ ಅಧ್ಯಕ್ಷೆ ಶರ್ಮಿಳಾ ಕಾರು ಜಖಂ

ರಾಜಭವನ ಮುತ್ತಿಗೆ – ಟಿಆರ್.ಎಸ್ ಕಾರ್ಯಕರ್ತರಿಂದ ವೈಎಸ್ಆರ್ ಅಧ್ಯಕ್ಷೆ ಶರ್ಮಿಳಾ ಕಾರು ಜಖಂ

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಅವರ ಕಾರನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೈದರಾಬಾದ್ ನ ರಾಜಭವನ ರಸ್ತೆಯಿಂದ ಎಸ್.ಆರ್ ನಗರ ಪೊಲೀಸ್ ಠಾಣೆಯವರೆಗೆ ಯಾವುದೇ ಪ್ರೋಟೋಕಾಲ್ ಅನುಸರಿಸಿಲ್ಲದ ಕಾರಣ ಪೊಲೀಸರು ಶರ್ಮಿಳಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ಶರ್ಮಿಳಾ ಅವರ ಕಾರನ್ನು ಟಿಆರ್.ಎಸ್ ಕಾರ್ಯಕರ್ತರು ಜಖಂಗೊಳಿಸಿದ್ದಾರೆ

ಸೋಮವಾರ ನರಸಂಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಶರ್ಮಿಳಾ ಅವರ ಪಾದಯಾತ್ರೆ ಮೇಲೆ ಟಿಆರ್.ಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದನ್ನು ವಿರೋಧಿಸಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಮುತ್ತಿಗೆ ಹಾಕಲು ಶರ್ಮಿಳಾ ಕರೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಇಂದು ಶರ್ಮಿಳ ಅವರ ಮನೆಯನ್ನು ಸುತ್ತುವರಿದು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆದರೆ ಶರ್ಮಿಳಾ ಪ್ರಗತಿ ಭವನದ ಸಮೀಪ ತಲುಪಲು ಯಶಸ್ವಿಯಾದರು. ನಂತರ ಪೊಲೀಸರು ರಸ್ತೆಗಳಿಗೆ ಬ್ಯಾರಿಕೇಡ್ ಗಳನ್ನು ಹಾಕಿ ತಡೆಯಬೇಕಾಯಿತು. ಇದರಿಂದ ನಗರದ ಹೃದಯ ಭಾಗದಲ್ಲಿ ಸಂಚಾರ ದಟ್ಟನೆ ಹೆಚ್ಚಾಗಿ ಜಾಮ್ ಉಂಟಾಗಿತ್ತು.

ಮಾಧ್ಯಮಗಳೊಂದಿಗೆ ಮಾತನಾಡಿದ ಶರ್ಮಿಳಾ, ಟಿಆರ್.ಎಸ್ ಗುಂಡಾಗಳಿಂದ ಹಾನಿಗೊಳಗಾದ ವಾಹನಗಳನ್ನು ಮುಖ್ಯಮಂತ್ರಿಗೆ ತೋರಿಸಲು ನಾನು ಬಯಸುತ್ತೇನೆ ಎಂದು ಹೇಳಿದರು.

ನಮ್ಮ ವಾಹನಗಳನ್ನು ಧ್ವಂಸಗೊಳಿಸಿ ನಮಗೆ ಬೆದರಿಕೆ ಹಾಕಿದ ಗೂಂಡಾಗಳನ್ನು ಟಿಆರ್.ಎಸ್ ವರಿಷ್ಠರು ಏಕೆ ಹೊರಹಾಕುತ್ತಿಲ್ಲ. ನನ್ನನ್ನು ಬಂಧಿಸಿ ಇಡೀ ದಿನ ಗೃಹಬಂಧನದಲ್ಲಿರಿಸುತ್ತಿರುವಾಗ ನಮ್ಮ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular