ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮುಖಂಡ ಚಂದ್ರಶೇಖರ್ ಗೌಡ ಅವರನ್ನು ನೇಮಕ ಮಾಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.
ಈಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಚಂದ್ರಶೇಖರ್ ಗೌಡ, ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಆಪ್ತರಾಗಿದ್ದು ಚಂದ್ರಶೇಖರ್ ಕೂಡ ಕೊರಟಗೆರೆ ತಾಲ್ಲೂಕಿನವರಾಗಿರುವುದು ವಿಶೇಷವಾಗಿದೆ.
ಇದುವರೆಗೂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಆರ್. ರಾಮಕೃಷ್ಣ ಅವರ ಸ್ಥಾನಕ್ಕೆ ಚಂದ್ರಶೇಖರ್ ಗೌಡ ನೇಮಕವಾಗಿದ್ದಾರೆ.