ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷದಿಂದ ಟಿಕೆಟ್ ನಿರಾಕರಿಸಿದ್ದನ್ನು ವಿರೋಧಿಸಿ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ ಹನ್ನೆರಡು ಮಂದಿ ಬಂಡಾಯಗಾರ ಅಭ್ಯರ್ಥಿಗಳನ್ನು ಬಿಜೆಪಿ ಅಮಾನತುಗೊಳಿಸಿದೆ.
ಹನ್ನೆರಡು ಬಂಡಾಯಗಾರರಲ್ಲಿ ಎಲ್ಲರೂ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಬಯಸಿದ್ದರು. ಭಾನುವಾರ ಏಳು ಮಂದಿ ಬಂಡಾಯಗಾರ ಅಭ್ಯರ್ಥಿಗಳನ್ನು ಅಮಾನತುಗೊಳಿಸಿದ ಬಿಜೆಪಿ ಮತ್ತೆ 5 ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿರುವವರನ್ನು ಅಮಾನತು ಮಾಡಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇಲೆ ಈ ಶಾಸಕರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್. ಪಾಟೀಲ್ ಹೇಳಿದ್ದಾರೆ.
ಅಮಾನತುಗೊಂಡಿರುವ ಬಿಜೆಪಿ ನಾಯಕರಲ್ಲಿ ವಾದ್ರಾದಿಂದ ದಿನುಭಾಯಿ ಪಟೇಲ್, ವಘೋಡಿಯಾದಿಂದ ಮಧುಭಾಯಿ ಶ್ರೀವಾಸ್ತವ್ ಮತ್ತು ವಡೋದರಾ ಜಿಲ್ಲೆಯ ಕುಲದೀಪ್ ಸಿನ್ ರೌಲ್ ಸೇರಿದ್ದಾರೆ. ಪಂಚಮಹಲ್ ಜಿಲ್ಲೆಯ ಶಾಹೆರಾದಿಂದ ಬಿ.ಪಾಗಿ, ಅರಾವಳಿ ಜಿಲ್ಲೆಯ ಧವಲ್ ಸಿನ್ಕ್ ಝಾಲಾ ಮತ್ತು ಮೆಹ್ಸಾನಾದಿಂದ ರಾಮ್ ಸಿನ್ಕ್ ಠಾಕೋರ್ ಅವರನ್ನು ಅಮಾನತುಗೊಳಿಸಲಾಗಿದೆ.
ಆನಂದ್, ಬನಸ್ಕಾಂತ ಮತ್ತು ಮಹಿಸಾಗರ್ ಜಿಲ್ಲೆಗಳಿಂದ ತಲಾ ಇಬ್ಬರನ್ನು ಅಮಾನತುಗೊಳಿಸಲಾಗಿದೆ. ಮಾನವಜಿ ಭಾಯ್ ದೇಸಾಯಿ, ಎಲ್.ಠಾಕೋರ್ ಬನಸ್ಕಾಂತದಿಂದ, ಎಸ್.ಎಂ. ಬಾಂತ್ ಮತ್ತು ಜೆಪಿ ಪಟೇಲ್ ಮಹಿಸಾಗರದಿಂದ ಮತ್ತು ರಮೇಶ್ ಝಾಲ ಮತ್ತು ಅಮರ್ಷಿ ಭಾಯಿ ಝಾಲಾ ಅವರನ್ನು ಆನಂದ್ ಜಿಲ್ಲೆಯಿಂದ ಅಮಾನತುಗೊಳಿಸಲಾಗಿದೆ.