Monday, September 16, 2024
Google search engine
Homeಮುಖಪುಟಜಾವಾದಲ್ಲಿ ಪ್ರಬಲ ಭೂಕಂಪನ - 56 ಮಂದಿ ಸಾವು

ಜಾವಾದಲ್ಲಿ ಪ್ರಬಲ ಭೂಕಂಪನ – 56 ಮಂದಿ ಸಾವು

ಇಂಡೋನೇಷ್ಯಾದ ಪ್ರಮುಖ ದ್ವೀಪ ಜಾವಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ 56 ಮಂದಿ ಮೃತಪಟ್ಟಿದ್ದು 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪನದಲ್ಲಿ ಡಜನ್ ಗಟ್ಟಲೆ ಜನರು ಮರಣ ಹೊಂದಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಮನೆಗಳು ಹಾನಿಗೊಳಗಾಗಿವೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಇದುವರೆಗೆ 44 ಜನರ ಶವಗಳನ್ನು ಹೊರತೆಗೆಯಲಾಗಿದೆ ಎಂದು ಪಶ್ಚಿಮ ಜಾವಾದ ಸಿಯಾಂಜೂರ್ ಪಟ್ಟಣದ ಸ್ಥಳೀಯ ಆಡಳೀತದ ವಕ್ತಾರ ಅಡಮ್ ಹೇಳಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೇ ಪ್ರಕಾರ ಭೂಕಂಪನವು 5.4ರಷ್ಟು ತೀವ್ರತೆಯನ್ನು ಹೊಂದಿತ್ತು ಮತ್ತು ಜಕಾರ್ತಾದ ದಕ್ಷಿಣ ಪಟ್ಟಣಗಳಿಗೆ ಭೂಕಂಪನ ಅಪ್ಪಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭೂಕಂಪನದಲ್ಲಿ 300 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಭೂಕಂಪದ ತೀವ್ರತೆ 5.6ರಷ್ಟು ಇತ್ತು. ಜಕಾರ್ತಾದಿಂದ ಸುಮಾರು 100 ಕಿಲೋ ಮೀಟ್ ಸಿಯಾಂಜೂರ್ ಬಳಿ ಅಪ್ಪಳಿಸಿದೆ ಎಂದು ವರದಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular