Wednesday, February 19, 2025
Google search engine
Homeಮುಖಪುಟಗುಜರಾತ್ ಮಾದರಿ ಅಂದ್ರೆ ದ್ವೇಷ ಮತ್ತು ಕೊಲ್ಲು ಎಂದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ

ಗುಜರಾತ್ ಮಾದರಿ ಅಂದ್ರೆ ದ್ವೇಷ ಮತ್ತು ಕೊಲ್ಲು ಎಂದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ

ಬಿಜೆಪಿಯ ಗುಜರಾತ್ ಮಾದರಿಯನ್ನು ದ್ವೇಷ ಮತ್ತು ಕೊಲ್ಲು ಬಳಿಕ ಹಬ್ಬ ಮತ್ತು ಪ್ರತಿಫಲ ಎಂದು ಪಶ್ಚಿಮ ಬಂಗಾಳದ ಸಂಸದೆ ಮಹುವಾ ಮೊಯಿತ್ರಾ ವ್ಯಾಖ್ಯಾನಿಸಿದ್ದಾರೆ. ಆಡಳಿತ ಪಕ್ಷವು ತನ್ನ ಗೋಧ್ರಾ ಶಾಸಕನಿಗೆ ಮತ್ತೆ ಚುನಾವಣೆಗೆ ಟಿಕೆಟ್ ನೀಡಿರುವುದನ್ನು ಉಲ್ಲೇಖಿಸಿ ಅಪರಾಧಿ ಅತ್ಯಾಚಾರಿಗಳು ಕೊಲೆಗಾರರು ಎಂದು ಕರೆದಿದ್ದಾರೆ.

ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ನ ಲೋಕಸಭಾ ಸದಸ್ಯೆ ಮೊಯಿತ್ರ ಅವರು ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿದಾರರಲ್ಲಿ ಸೇರಿದ್ದಾರೆ.

ಬಿಲ್ಕಿಸ್ ಪ್ರಕರಣದ ಅತ್ಯಾಚಾರಿಗಳು ಮತ್ತು ಕೊಲೆಗಾರರನ್ನು ಸಂಸ್ಕೃತಿ ಬ್ರಾಹ್ಮಣರು ಎಂದು ಕರೆದ ಗೋಧ್ರಾ ಶಾಸಕ ಬಿಜೆಪಿಯಿಂದ ಮರು ನಾಮನಿರ್ದೇಶನಗೊಂಡಿದ್ದಾರೆ.

15 ವರ್ಷಗಳ ಕಾಲ ಜೈಲಿನಲ್ಲಿದ್ದ ಅಪರಾಧಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ ಸಮಿತಿಯ ಭಾಗವಾಗಿದ್ದ ಬಿಜೆಪಿ ಶಾಸಕ ಚಂದ್ರಸಿನ್ಹ ರೌಲ್ಜಿ ಈ ಹಿಂದೆ ಕಾಂಗ್ರೆಸ್ ನೊಂದಿಗೆ ಸೇರಿದ್ದರು. ಮಾಜಿ ರಾಜ್ಯ ಸಚಿವ ಅವರು ಗೋಧ್ರಾದಿಂದ ಆರು ಬಾರಿ ಶಾಸಕರಾಗಿದ್ದಾರೆ. 2002ರ ಗಲಭೆಯ ಕೇಂದ್ರಬಿಂದುವಾಗಿತ್ತು. ಈ ಸಮಯದಲ್ಲಿ ಬಿಲ್ಕಿಸ್ ಬಾನೋ ಅವರನ್ನು ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಲಾಗಿತ್ತು ಮತ್ತು ಅವರ ಮೂರು ವರ್ಷದ ಮಗಳು ಸೇರಿ ಅವರ ಕುಟುಂಬದ ಒಂಬತ್ತು ಸದಸ್ಯರು ಕೊಲ್ಲಲ್ಪಟ್ಟಿದ್ದರು.

ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ಬ್ರಾಹ್ಮಣರಾಗಿದ್ದರು ಮತ್ತು ಬ್ರಾಹ್ಮಣರು ಉತ್ತಮ ಸಂಸ್ಕಾರ ಹೊಂದಿದ್ದಾರೆ. ಅವರನ್ನು ಮೂಲೆಗುಂಪು ಮತ್ತು ಶಿಕ್ಷಿಸುವುದು ಯಾರೊಬ್ಬರ ಕೆಟ್ಟ ಉದ್ದೇಶವಾಗಿರಬಹುದು ಎಂದು ಗೋಧ್ರಾ ಶಾಸಕ ಹೇಳಿದ್ದಾನೆಂದು ಎನ್.ಡಿಟಿವಿ ವರದಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular