Saturday, October 19, 2024
Google search engine
Homeಮುಖಪುಟನವೆಂಬರ್ 1 ರಿಂದ ಜೆಡಿಎಸ್ ಪಂಚರತ್ನ ಯಾತ್ರೆಗೆ ಚಾಲನೆ

ನವೆಂಬರ್ 1 ರಿಂದ ಜೆಡಿಎಸ್ ಪಂಚರತ್ನ ಯಾತ್ರೆಗೆ ಚಾಲನೆ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಪಂಚರತ್ನ ರಥ ಯಾತ್ರೆಗೆ ಚಾಲನೆ ನೀಡಲಿದ್ದು, ಮುಂಬರುವ ಚುನಾವಣೆಗೆ ಸಜ್ಜಾಗಿದೆ.

ಕುಮಾರಸ್ವಾಮಿ ಅವರು ರಾಜ್ಯಾದ್ಯಂತ 90-100 ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಕೋಲಾರ ಜಿಲ್ಲೆಯ ಮುಳಬಾಗಲು ಪಟ್ಟಣದಲ್ಲಿ ಘೋಷಿಸಲಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಖಾಸಗಿ ಸುದ್ದಿಸಂಸ್ಥೆಗೆ ತಿಳಿಸಿದ್ದು ಈ ಅಭ್ಯರ್ಥಿಗಳು ಖಚಿತವಾಗಿ ಗೆಲ್ಲುತ್ತಾರೆ ಮತ್ತು ಅವರ ಮೇಲೆ ನಮಗೆ ಹೆಚ್ಚಿನ ವಿಶ್ವಾಸವಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಪುತ್ರ ಕುಮಾರಸ್ವಾಮಿ ಅವರು ಕೋಲಾರ ಜಿಲ್ಲೆಯ ಕುರುಡುಮಲೆಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭಿಸಿ ಮುಳಬಾಗಲಿಗೆ ತೆರಳಲಿದೆ. ಮಧ್ಯಾಹ್ನ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಕುಮಾರ ಸ್ವಾಮಿ ಮಾತನಾಡಲಿದ್ದಾರೆ.

ಯಾತ್ರೆಯ ಮೊದಲ ಹಂತವು ಸುಮಾರು 35 ರಿಂದ 36 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ ಮತ್ತು ಡಿಸೆಂಬರ್ 6ರಂದು ಅನೇಕಲ್ ನಲ್ಲಿ ಸಾರ್ವಜನಿಕ ಸಭೆಯೊಂದಿಗೆ ಮುಕ್ತಾಯಗೊಳ್ಳಲಿದೆ.

ಎರಡನೇ ಹಂತವನ್ನು ಡಿಸೆಂಬರ್ ಮಧ್ಯದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಇಲ್ಲಿಯೂ ಕೂಡ 36 ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ಸಂಚರಿಸಲಿದೆ ಎಂದು ಜೆಡಿಎಸ್ ಮೂಲಗಳನ್ನು ಉಲ್ಲೇಖಿಸಿ ಡೆಕ್ಕನ್ ಕ್ರಾನಿಕಲ್.ಕಾಮ್ ವರದಿ ಮಾಡಿದೆ.

ಐದು ಸ್ತಬ್ದಚಿತ್ರಗಳೊಂದಿಗೆ ಪಂಚರತ್ನ ರಥ ಯಾತ್ರೆ ಸಾಗಲಿದ್ದು ಜೆಡಿಎಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ, ಆರೋಗ್ಯ, ಕೃಷಿ, ನೀರಾವಾರಿ, ವಸತಿ ಮತ್ತು ಉದ್ಯೋಗ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ವಿಂಟೇಜ್ ಡಿಸೈನ್ ಹೊಂದಿರುವ ಮತ್ತೊಂದು ವಾಹನವು ಬೃಹತ್ ಎಲ್ಇಡಿ ಪರದೆಯನ್ನು ಹೊತ್ತೊಯ್ಯುತ್ತದೆ. ಅಲ್ಲಿ ಹಿಂದಿನ ಜೆಡಿಎಸ್ ಸರ್ಕಾರದ ಸಾಧನೆಗಲೂ ಮತ್ತು ಪಕ್ಷದ ನಾಯಕರ ಕೊಡುಗೆಗಳ ವಿಡಿಯೋಗಳು ಮತ್ತು ಆಡಿಯೋಗಳನ್ನು ಕಿರು ಸಾಕ್ಷ್ಯ ಚಿತ್ರಗಳೊಂದಿಗೆ ಪ್ಲೇ ಮಾಡಲಾಗುವುದು ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular