Wednesday, December 4, 2024
Google search engine
Homeಮುಖಪುಟಪೊಲೀಸರಿಗೆ ಒಂದು ರಾಷ್ಟ್ರ, ಒಂದು ಸಮವಸ್ತ್ರ ಕಲ್ಪನೆ ನೀಡಿದ ಪ್ರಧಾನಿ ಮೋದಿ

ಪೊಲೀಸರಿಗೆ ಒಂದು ರಾಷ್ಟ್ರ, ಒಂದು ಸಮವಸ್ತ್ರ ಕಲ್ಪನೆ ನೀಡಿದ ಪ್ರಧಾನಿ ಮೋದಿ

ಪೊಲೀಸರಿಗೆ ಒಂದು ರಾಷ್ಟ್ರ, ಒಂದು ಸಮವಸ್ತ್ರ ಎಂಬ ಕಲ್ಪನೆಯನ್ನು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ ಇದನ್ನು ಪೊಲೀಸರ ಮೇಲೆ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಆಯೋಜಿಸಿದ್ದ ಆಂತರಿಕ ಭದ್ರತೆ ಕುರಿತ ಚಿಂತನ್ ಶಿಬಿರ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪೊಲೀಸರಿಗೆ ಒಂದು ರಾಷ್ಟ್ರ, ಒಂದು ಸಮವಸ್ತ್ರ ಕೇವಲ ಒಂದು ಕಲ್ಪನೆ. ನಾನು ಅದನ್ನು ನಿಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿಲ್ಲ. ಸುಮ್ಮನೆ ಯೋಚಿಸಿ, ಇದು ಸಂಭವಿಸಬಹುದು. ಇದು 5, 50 ಅಥವಾ 100 ವರ್ಷಗಳಲ್ಲಿ ಸಂಭವಿಸಬಹುದು. ಅದರ ಬಗ್ಗೆ ಯೋಚಿಸಿ ಎಂದು ಪ್ರಧಾನಿ ಹೇಳಿದರು.

ಅಪರಾಧಗಳು ಮತ್ತು ಅಪರಾಧಿಗಳನ್ನು ನಿಭಾಯಿಸಲು ರಾಜ್ಯಗಳ ನಡುವೆ ನಿಕಟ ಸಹಕಾರಕ್ಕಾಗಿ ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಕಾನೂನು ಮತ್ತು ಸುವ್ಯವಸ್ಥೆ ಈಗ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ಅಪರಾಧವು ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯವಾಗಿಯು ಬದಲಾಗುತ್ತಿದೆ. ತಂತ್ರಜ್ಞಾನದೊಂದಿಗೆ ಅಪರಾಧಗಳು ಈಗ ನಮ್ಮ ಗಡಿಯಾಚೆಯಿಂದ ಅಪರಾಧಗಳನ್ನು ಮಾಡುವ ಶಕ್ತಿಯನ್ನು ಹೊಂದಿದ್ದಾರೆ. ಹಾಗಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರದ ಏಜೆನ್ಸಿಗಳ ನಡುವಿನ ಸಮನ್ವಯವು ನಿರ್ಣಾಯಕವಾಗಿದೆ ಎಂದು ಮೋದಿ ತಿಳಿಸಿದರು.

ನಾವು 5G ಯುಗವನ್ನು ಪ್ರವೇಶಿಸುತ್ತಿದ್ದೇವೆ. ಅದರೊಂದಿಗೆ ಮುಖ ಗುರುತಿಸುವಿಕೆ ತಂತ್ರಜ್ಞಾನ, ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ತಂತ್ರಜ್ಞಾನ, ಡ್ರೋಣ್ ಮತ್ತು ಸಿಸಿಟಿವಿ ತಂತ್ರಜ್ಞಾನದಲ್ಲಿ ಹಲವಾರು ಸುಧಾರಣೆಗಳಿವೆ. ನಾವು ಅಪರಾಧಿಗಳಿಗಿಂತ ಹತ್ತು ಹೆಜ್ಜೆ ಮುಂದಿರಬೇಕು ಎಂದರು.

ಅದು ಸೈಬರ್ ಕ್ರೈಮ್ ಆಗಿರಲಿ ಅಥವಾ ಶಸ್ತ್ರಾಸ್ತ್ರಗಳು ಅಥವಾ ಮಾದಕವಸ್ತುಗಳ ಕಳ್ಳಸಾಗಣೆಗಾಗಿ ಡ್ರೋನ್ ತಂತ್ರಜ್ಞಾನ ಬಳಕೆಯಾಗಿರಲಿ, ಅಂತಹ ಅಪರಾಧಗಳನ್ನು ತಡೆಗಟ್ಟಲು ನಾವು ಹೊಸ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular