ಡಿಸೆಂಬರ್ ನಲ್ಲಿ ಎಂಸಿಡಿ ಚುನಾವಣೆ ನಿಗದಿಯಾಗಿದ್ದು, ಆಮ್ ಆದ್ಮಿ ಪಕ್ಷ ನೈರ್ಮಲ್ಯವನ್ನು ಪ್ರಮುಖ ಚುನಾವಣಾ ವಿಷಯವನ್ನಾಗಿ ಬಳಸಿಕೊಳ್ಳಲು ಯೋಜಿಸಿದೆ ಎಂದು ಎಎಪಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಸತತ 15 ವರ್ಷಗಳ ಕಾಲ ಬಿಜೆಪಿ ಅಧಿಕಾರದಲ್ಲಿದ್ದರೂ ರಾಜಧಾನಿಯನ್ನು ಸ್ವಚ್ಛಗಳಿಸಲು ಸಾಧ್ಯವಾಗಿಲ್ಲ. ಇದು ಬಿಜೆಪಿಯ ಅಸಮರ್ಥೆತೆಯನ್ನು ತೋರಿಸುತ್ತದೆ ಎಂದು ಟೀಕಾಪ್ರಹಾರ ನಡೆಸಿದೆ.
ಕೇಜ್ರಿವಾಲ್ ದೆಹಲಿಯಲ್ಲಿ ಭೂಕುಸಿತವಾದ ಬಂದೂರಿ ಪ್ರದೇಶಕ್ಕೆ ಭೇಟಿ ನೀಡಿ ಜನರನ್ನು ಉದ್ದೇಶಿಸಿ 10 ನಿಮಿಷಗಳ ಕಾಲ ಮಾತನಾಡಿದರು. ಇದಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ನಾನು ಗಾಜಿಪುರಕ್ಕೆ ಭೇಟಿ ನೀಡಿದ್ದೇನೆ. ಇದು ಮುಜುಗರದ ಸಂಗತಿ. ದೆಹಲಿ ದೇಶದ ರಾಜಧಾನಿ. ಇಲ್ಲಿಗೆ ವಿಶ್ವದಾದ್ಯಂತ ಜನರು ಭೇಟಿ ನೀಡುತ್ತಾರೆ. ಅವರು ಏನು ನೋಡುತ್ತಾರೆ. ಕಸದ ಪರ್ತಗಳನ್ನು ನೋಡಬೇಕೇ ಎಂದು ಕಿಡಿಕಾರಿದರು.
ಬಿಜೆಪಿ 15 ವರ್ಷಗಳಲ್ಲಿ ನೈರ್ಮಲ್ಯ ಕಾಪಾಡುವತ್ತ ಗಮನಹರಿಸಿಲ್ಲ. ಹೀಗಾಗಿ ದೆಹಲಿಯಲ್ಲಿ ಕಸದ ರಾಶಿಗಳೇ ಬಿದ್ದಿವೆ. ಇದನ್ನು ನೋಡಿ ದೆಹಲಿಯ ಜನರು ತಲೆ ತಗ್ಗಿಸುವಂತೆ ಆಗಿದೆ. ವಾಸ್ತವವಾಗಿ ಪ್ರತಿ ಬೀದಿಯಲ್ಲಿ ಕಸವಿದೆ. ಆ ಕಸದ ರಾಶಿಗಳು ಬಿದ್ದಿರುವ ಪ್ರದೇಶಕ್ಕೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ತಡೆದರು. ಹಾಗಾಗಿ ಗಾಜಿಪುರ ಕಸವನ್ನು ನೋಡಲು ಬಯಸಲಿಲ್ಲ ಎಂದು ಕೇಜ್ರಿವಾಲ್ ಹೇಳಿದರು.