ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಕರ್ನಾಟಕದ ಎಂ.ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಮತ ಎಣಿಕೆ ನಡೆದು ಖರ್ಗೆ 7897 ಮತಗಳನ್ನು ಪಡೆದು ಆಯ್ಕೆಯಾದರು. ಖರ್ಗೆ ಅವರ ಪ್ರತಿಸ್ಪರ್ಧಿ ಶಶಿ ತರೂರ್ 1072 ಮತಗಳನ್ನು ಪಡೆದಿದ್ದಾರೆ.
ಸಾವಿರಕ್ಕೂ ಹೆಚ್ಚು ಸಹದ್ಯೋಗಿಗಳ ಬೆಂಬಲವನ್ನು ಪಡೆದಿರುವುದು ಮತ್ತು ದೇಶಾದ್ಯಂತ ಕಾಂಗ್ರೆಸಸ್ ನ ಅನೇಕ ಹಿತೈಷಿಗಳ ಭರವಸೆ ಮತ್ತು ಆಕಾಂಕ್ಷೆಗಳನ್ನು ಹೊತ್ತುಕೊಂಡಿದ್ದು ಒಂದು ಸುಯೋಗವಾಗಿತ್ತು ಎಂದು ಶಶಿ ತರೂರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಖರ್ಗೆ ಅವರ ಅನುಭವ, ಬದ್ದತೆ ಮತ್ತು ಒಳನೋಟ ಪಕ್ಷವನ್ನು ಬಲಪಡಿಸಲು ಸಹಕಾರಿಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಲಬುರಗಿಯಿಂದ ದೆಹಲಿಯತ್ತ ಕಾಂಗ್ರೆಸ್ ಮುಖಂಡರು ದೌಡಾಯಿಸಿದ್ದಾರೆ.
ಶಾಸಕ ಪ್ರೀಯಾಂಕ್ ಖರ್ಗೆ, ಎಂವೈ ಪಾಟೀಲ್, ಮಾಜಿ ಶಾಸಕ ಶರಣಪ್ರಕಾಶ ಪಾಟೀಲ್ ಸೇಡಂ, ಅಲ್ಲಮಪ್ರಭು ಪಾಟೀಲ್, ಸೇರಿ ಹಲವು ಕೈ ಮುಖಂಡರು ರಾಜಧಾನಿ ದೆಹಲಿಗೆ ತೆರಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ನಡುವೆ ಫೈಟ್ ನಡೆದಿದ್ದು, ಅಂತಿಮವಾಗಿ ಖರ್ಗೆ ಆಯ್ಕೆಯಾದರು. ಖರ್ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶುಭಕೋರಲು ಕಲಬುರಗಿ ಕೈ ಟೀಂ ದೆಹಲಿ ಆಗಮಿಸಿದೆ.
ಖರ್ಗೆ ಬೆಂಬಲಿಗರಿಂದ ಪೂಜೆ
ಆಯ್ಕೆಗೂ ಮೊದಲು ಕಲಬುರಗಿಯ ಶರಣಬಸವೇಶ್ವರರ ದೇವರಿಗೆ, ಖಾಜಾ ಬಂದೆ ನವಾಜ್ ದರ್ಗಾ ಸೇರಿ ಹಲವಡೆ ಪೂಜೆ ಸಲ್ಲಿಸಿ ಅಭಿಮಾನಿಗಳು ಗೆಲುವಿಗೆ ಪ್ರಾಥನೆ ಸಲ್ಲಿಸಿದರು. ಕಲಬುರಗಿ ಜಿಲ್ಲೆ ಅಫಜಲಪುರ ಪಟ್ಟಣದಲ್ಲಿ ಅಭಿಮಾನಿಗಳು ದೀರ್ಘದಂಡ ನಮಸ್ಕಾರ ಹಾಕಿದರು. ಪಟ್ಟಣದ ಬಸವೇಶ್ವರ ವೃತ್ತದಿಂದ ಡಾ ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಗೆಲುವಿಗೆ ಪ್ರಾಥನೆ ಸಲ್ಲಿಸಿದರು.