ತಮಿಳುನಾಡಿನಲ್ಲಿ ನೆಲೆಸಿರುವ ಮತ್ತು ಅದ್ವೈತದ ಧಾರ್ಮಿಕ ತತ್ವವನ್ನು ಪ್ರಚಾರ ಮಾಡುತ್ತಿರುವ ಸ್ಮಾರ್ತ ಬ್ರಾಹ್ಮಣರು ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಾಗೊಳಿಸಿತು.
ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಎಸ್.ರವೀಂದ್ರ ಭಟ್ ಅವರನ್ನೊಳಗೋಂಡ ಪೀಠವು ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಸ್ಮಾರ್ತ ಬ್ರಾಹ್ಮಣರು ಧಾರ್ಮಿಕ ಪಂಗಡವಲ್ಲ ಅಮತ್ತು ಆದ್ದರಿಂದ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಲಾಗುವುದಿಲ್ಲ ಎಂದು ಹೇಳಿದೆ.
ಅನೇಕ ಜನರು ಅದ್ವೈತ ತತ್ವವನ್ನು ಅನುಸರಿಸುತ್ತಾರೆ. ಹೀಗಾದರೆ ನಾವು ಅಲ್ಪಸಂಖ್ಯಾತರ ರಾಷ್ಟ್ರವನ್ನು ಹೊಂದುತ್ತೇವೆ ಎಂದು ಪೀಠ ತಿಳಿಸಿದೆ.
ಜೂನ್ 7, 2022ರಂದು ಹೈಕೋರ್ಟ್ ಸ್ಮಾರ್ತ ಬ್ರಾಹ್ಮಣರು ಭಾರತ ಸಂವಿಧಾನದ 26ರ ಅಡಿಯಲ್ಲಿ ಪ್ರಯೋಜನಗಳಿಗೆ ಅರ್ಹರಲ್ಲ ಎಂದು ಹೇಳಿತ್ತು.
ಸ್ಮಾರ್ತ ಬ್ರಾಹ್ಮಣರು ಅಥವಾ ಬೇರೆ ಯಾವುದೇ ಹೆಸರಿನಿಂದ ಯಾವುದೇ ಸಾಮಾನ್ಯ ಸಂಘಟನೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಇದು ಕೇವಲ ಜಾತಿ/ಸಮುದಾಯಕ್ಕೆ ಯಾವುದೇ ವಿಶಿಷ್ಟತೆಯಿಲ್ಲದೆ, ತಮಿಳುನಾಡು ರಾಜ್ಯದ ಇತರ ಬ್ರಾಹ್ಮಣರಿಂದ ಅವರನ್ನು ಪ್ರತ್ಯೇಕಿಸುತ್ತದೆ ಕೋರ್ಟ್ ತಿಳಿಸಿತ್ತು.
ಆದ್ದರಿಂದ ಅವರು ತಮ್ಮನ್ನು ತಾವು ಧಾರ್ಮಿಕ ಪಂಗಡ ಎಂದು ಕರೆದುಕೊಳ್ಳಲು ಸಾಧ್ಯವಿಲ್ಲ. ಪರಿಣಾಮವಾಗಿ ಅವರು ಭಾರತದ ಸಂವಿಧಾನದ 26ನೇ ವಿಧಿಯಡಿಯಲ್ಲಿ ಪ್ರಯೋಜನಗಳಿಗೆ ಅರ್ಹರಲ್ಲ. ಕಾನೂನಿನ ಎರಡು ಗಣನೀಯ ಪ್ರಶ್ನೆಗಳಿಗೆ ಮೇಲ್ಮನವಿದಾರರ ವಿರುದ್ಧವಾಗಿ ಉತ್ತರಿಸಲಾಗುತ್ತದೆ ಎಂದು ಹೈಕೋರ್ಟ್ ಹೇಳಿತ್ತು.