ಕೆರೆ ಕೋಡಿಯಲ್ಲಿ ಕಾಲು ತೊಳೆಯಲು ಹೋಗಿ ನೀರಿನ ರಭಸಕ್ಕೆ ಇಬ್ಬರು ಕೊಚ್ಚಿ ಹೋಗಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಲ್ಲೂರು ಕೆರೆಯಲ್ಲಿ ಸಂಭವಿಸಿದೆ.
ಕೆರೆ ಕೋಡಿಯಲ್ಲಿ ಕೊಚ್ಚಿಹೋದ ಇಬ್ಬರನ್ನು ಹನುಮಂತರಾಜು ಮತ್ತು ನಟರಾಜು ಎಂದು ಗುರುತಿಸಲಾಗಿದೆ. ನೀರಿನಲ್ಲಿ ಕೊಚ್ಚಿ ಹೋದವರನ್ನು ಕೂಲಿ ಕಾರ್ಮಿಕರು ಎಂದು ತಿಳಿದುಬಂದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಕೊಚ್ಚಿ ಹೋದವರನ್ನು ಪತ್ತೆ ಹಚ್ಚಲು ಶೋಧ ಕಾರ್ಯ ನಡೆಸಿದೆ. ಸ್ಥಳಕ್ಕೆ ಭೇಟಿ ನೀಡಿರುವ ಶಾಸಕ ಮಸಾಲ ಜಯರಾಮ್ ಶವ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ಮಾಡಿದ್ದಾರೆ.
ಶವಗಳ ಪತ್ತೆಗೆ ಅಗತ್ಯ ಸಲಕರಣೆ ಬಳಸಲು ಅಗ್ನಿಶಾಮ ದಳದ ಸಿಬ್ಬಂದಿಗೆ ತಿಳಿಸಿದ್ದೇನೆ. ಡ್ರೋಣ್ ಕ್ಯಾಮೆರ ಬಳಸಿ ಶವ ಪತ್ತೆಗೆ ಸೂಚಿಸಲಾಗಿದೆ ಎಂದರು.