ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಹೆಸರನ್ನು ಪಕ್ಷದ ವರಿಷ್ಠೆ ಸೋನಿಯಾಗಾಂಧಿ ಸೂಚಿಸಿಲ್ಲ ಎಂದು ಅಧ್ಯಕ್ಷೀಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ ಮತ್ತು ಪಕ್ಷದ ಹಂಗಾಮಿ ಅಧ್ಯಕ್ಷರಿಂದ ಬೆಂಬಲ ಪಡೆಯುವ ಊಹಾಪೋಹಗಳನ್ನು ಖರ್ಗೆ ತಳ್ಳಿ ಹಾಕಿದ್ದಾರೆ.
ಪಕ್ಷದ ಅಧ್ಯರ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ತಮ್ಮ ಹೆಸರನ್ನು ಸೂಚಿಸಿಲ್ಲ. ಇದೆಲ್ಲವೂ ವದಂತಿ ಎಂದು ಖರ್ಗೆ ತಿಳಿಸಿದರು.
ಸೋನಿಯಾ ಗಾಂಧಿ ನನ್ನ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿರುವುದು ವದಂತಿ, ನಾನು ಇದನ್ನು ಎಂದಿಗೂ ಹೇಳಿಲ್ಲ. ಗಾಂಧೀ ಕುಟುಂಬದ ಯಾರೂ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಅಥವಾ ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷ, ಸೋನಿಯಾ ಗಾಂಧಿ ಮತ್ತು ನನ್ನ ಮಾನಹಾನಿಗಾಗಿ ಯಾರೋ ಈ ವದಂತಿ ಹಬ್ಬಿಸಿದ್ದಾರೆ. ಅವರು ಪಕ್ಷದ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಮತ್ತು ಯಾವುದೇ ಅಭ್ಯರ್ಥಿಯ ಬೆಂಬಲಕ್ಕೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಖರ್ಗೆ ತಿಳಿಸಿದರು.
ಉತ್ತರ ಪ್ರದೇಶದ ಮತದಾರರ ಕುರಿತು ಮಾತನಾಡಿದ ಅವರು, ಯುಪಿಯಲ್ಲಿ ಒಟ್ಟು 1250 ಮತದಾರರು ಇದ್ದಾರೆ. ನನ್ನನ್ನು ಸ್ಪರ್ಧಿಸಲು ಕೇಳಿದ ಅಭ್ಯರ್ಥಿಗಳು ನನ್ನ ಗೆಲುವಿಗೆ ಕಾರಣರಾಗುತ್ತಾರೆ ಎಂದು ಖರ್ಗೆ ಹೇಳಿದರು.