ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರು ಅವರು ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದು ಹೈಕಮಾಂಡ್ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂಬ ಹೇಳಿಕೆಯನ್ನು ತಳ್ಳಿಹಾಕಿರುವ ರಾಹುಲ್ ಗಾಂಧಿ ಇಂತಹ ಹೇಳಿಕೆ ಅವರಿಗೆ ಅವಮಾನಕರ ಎಂದು ಹೇಳಿದ್ದಾರೆ.
ಮೊದಲನೆಯದಾಗಿ ಚುನಾವಣೆ ನಡೆಯುತ್ತಿದೆ. ನಾನು ಈ ಸ್ಥಾನದ ಬಗ್ಗೆ ಅಭಿಪ್ರಾಯ ನೀಡಲು ಬಯಸುವುದಿಲ್ಲ. ಇಬ್ಬರೂ ಅಭ್ಯರ್ಥಿಗಳು ಸಮರ್ಥರಿದ್ದಾರೆ. ಆದರೆ ಅವರ ಕುರಿತು ವ್ಯಕ್ತವಾಗಿರುವ ಹೇಳಿಕೆಗಳು ಅವಮಾನಕರವೆಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.
ರಾಜಸ್ಥಾನ ಸರ್ಕಾರ ಕೈಗಾರಿಕೋದ್ಯಮಿಗೆ ಆದ್ಯತೆ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ತನಗೆ ಸಹಾಯ ಮಾಡಲು ರಾಜಕೀಯ ಶಕ್ತಿಯನ್ನು ಬಳಸಲಿಲ್ಲ. ನನ್ನ ವಿರೋಧವಿರುವುದು ಬಿಜೆಪಿ ಸರ್ಕಾರದ ಎರಡು-ಮೂರು ಜನರಿಗೆ ಸಹಾಯ ಮಾಡುವ ಮತ್ತು ಪ್ರತಿಯೊಂದು ವ್ಯವಹಾರವನ್ನು ಎಕಸ್ವಾಮ್ಯಗೊಳಿಸಲು ಸಹಾಯ ಮಾಡುವ ನೀತಿ ಎಂದು ಹೇಳಿದರು.
ನಾನು ವ್ಯಾಪಾರ ಅಥವಾ ಕಾರ್ಪೋರೇಟ್ ಗಳ ವಿರೋಧಿಯಲ್ಲ. ನಾನು ಭಾರತೀಯ ವ್ಯವಹಾರಗಳ ಸಂಪೂರ್ಣ ಏಕಸ್ವಾಮ್ಯವನ್ನು ವಿರೋಧಿಸುತ್ತೇನೆ. ಈ ನಡುವೆ ಬಿಜೆಪಿ ಕೆಲವೇ ಜನರಿಗೆ ಸಹಾಯ ಮಾಡುವ ಮೂಲಕ ಎಲ್ಲಾ ವ್ಯವಹಾರಗಳನ್ನು ಸಂಪೂರ್ಣ ಏಕಸ್ವಾಮ್ಯಗೊಳಿಸಿದೆ ಎಂದರು.
ರಾಜಕೀಯ ವ್ಯವಸ್ಥೆಯು ಇಬ್ಬರು ಅಥವಾ ಮೂರು ಜನರಿಗೆ ಸಹಾಯ ಮಾಡಲು ಮುಂದಾದರೆ ಅದು ದೇಶಕ್ಕೆ ಹಾನಿ ಮಾಡುತ್ತದೆ. ಕೆಲವರಿಗೆ ಸಹಾಯ ಮಾಡಲು ರಾಜಕೀಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧ ನನ್ನ ವಾದವಿದೆ ಎಂದು ರಾಹುಲ್ ಹೇಳಿದರು.