Thursday, November 21, 2024
Google search engine
Homeಮುಖಪುಟಗಾಂಧಿ ಕುಟುಂಬ ಒಲ್ಲೆ ಎಂದಿದ್ದಕ್ಕೆ ನಾನು ಸ್ಪರ್ಧೆ ಮಾಡಿದ್ದೇನೆ - ಮಲ್ಲಿಕಾರ್ಜುನ ಖರ್ಗೆ

ಗಾಂಧಿ ಕುಟುಂಬ ಒಲ್ಲೆ ಎಂದಿದ್ದಕ್ಕೆ ನಾನು ಸ್ಪರ್ಧೆ ಮಾಡಿದ್ದೇನೆ – ಮಲ್ಲಿಕಾರ್ಜುನ ಖರ್ಗೆ

ರಾಹುಲ್ ಗಾಂಧಿ, ಪ್ರಿಯಾಂಕ ಸೇರಿ ಗಾಂಧಿ ಕುಟುಂಬದಿಂದ ಯಾರೂ ಅಧ್ಯಕ್ಷ ಆಗೋಕೆ ತಯಾರಿಲ್ಲ. ಹೀಗಾಗಿ ಎಲ್ಲರ ಒತ್ತಡ ಮೇರೆಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇನೆ ಎಂದು ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪಕ್ಷದ ಮೂಲಭೂತ ತತ್ವಗಳಿಗೆ ಗಟ್ಟಿಯಾದ ಧ್ವನಿ ಬೇಕಾಗಿದೆ. ಆ ಕೆಲಸ ನಾನು ಮಾಡಿದ್ದೇನೆ ಎಂಬ ನಂಬಿಕೆ ಇಟ್ಟು ಹಿರಿಯ ಮುಖಂಡರು, ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಎಲ್ಲರೂ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದರು. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ದಿನೋಪಯೋಗಿ ವಸ್ತುಗಳ ಬೆಲೆ ಗಗನಕ್ಕೆ ಏರಿ ಕುಳಿತಿದೆ. ಬೆಲೆ ಏರಿಕೆ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದರು.

ನಾವು ಈ ಹಿಂದೆ ಬಡತನ ನಿರ್ಮೂಲನೆಗೆ ಹೋರಾಟ ಮಾಡಿದ್ದೇವೆ. ಸಂವಿಧಾನ ರಕ್ಷಣೆ ಮಾಡೋದು ನಮ್ಮೆಲ್ಲರ ಕರ್ತವ್ಯ ಇದೆ. ಇವತ್ತು ಜನ ತಾಳ್ಮೆ ಕಳೆದುಕೊಂಡು ಆಕ್ರೋಶ ದಿಂದ ಸರ್ಕಾರದ ಮೇಲೆ ಮುಗಿ ಬೀಳುತ್ತಿದ್ದಾರೆ ಎಂದು ತಿಳಿಸಿದರು.

ನಾವು ಉತ್ತಮ ರಸ್ತೆ ಕೊಟ್ಟಿದ್ದೇವೆ. ಇವತ್ತು ರಸ್ತೆಗಳಲ್ಲಿ ಪಾಟ್ ಹೋಲ್ ಗಳು ಬಿದ್ದಿವೆ. ನಮ್ಮ ದೇಶದಲ್ಲಿ ಅನ್ನಕ್ಕಾಗಿ ಜನರು ಪರದಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಯಾವ ಪಕ್ಷದಲ್ಲಿ ಯುವಕರು ಹೆಚ್ಚು ಇರಲ್ಲವೋ ಆ ಪಕ್ಷ ಬೆಳೆಯೋದಿಲ್ಲ ಎಂದು ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular