Saturday, October 19, 2024
Google search engine
Homeಜಿಲ್ಲೆತುಮಕೂರು ಜಿಲ್ಲೆ ಮದಲೂರು ಕೆರೆಗೆ ಕೋಣನ ಬಲಿ - ತಡವಾಗಿ ಬೆಳಕಿಗೆ ಬಂದ ಘಟನೆ

ತುಮಕೂರು ಜಿಲ್ಲೆ ಮದಲೂರು ಕೆರೆಗೆ ಕೋಣನ ಬಲಿ – ತಡವಾಗಿ ಬೆಳಕಿಗೆ ಬಂದ ಘಟನೆ

ಇತ್ತೀಚೆಗೆ ಸುರಿದ ಭಾರೀ ಮಳೆಗೆ ತುಂಬಿದ ಕೆರೆಗೆ ಬಾಗಿನ ಅರ್ಪಿಸುವ ಬದಲು ಕೋಣನ ಬಲಿ ನೀಡಿ ಮತ್ತು ಕೋಣನ ತಲೆಯನ್ನು ದಲಿತರು ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿರುವ ಅಮಾನವೀಯ ಘಟನೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಮದಲೂರಿನಲ್ಲಿ ನಡೆದಿದೆ ಎಂದು ಪ್ರಜಾ ಕಹಳೆ ಪತ್ರಿಕೆ ವರದಿ ಮಾಡಿದೆ.

ವೈಚಾರಿಕ, ವೈಜ್ಞಾನಿಕ ಯುಗದಲ್ಲಿ ಮೌಢ್ಯಕ್ಕೆ ಶರಣಾಗಿ ಕೆರೆಗೆ ಮತ್ತು ಜನತೆಗೆ ಯಾವುದೇ ಕೇಡು ಉಂಟಾಗಬಾರದು ಎಂಬ ಕಾರಣದಿಂದ ಕೆರೆಕೋಡಿಯಲ್ಲಿದ್ದ ದುರ್ಗಮ್ಮನಿಗೆ ಆರು ವರ್ಷದ ಕೋಣನ ಬಲಿ ನೀಡಿದ್ದಾರೆ.

ನಂತರ ದಲಿತ ಸಮುದಾಯದ ವ್ಯಕ್ತಿ ಕತ್ತರಿಸಿದ ಕೋಣನ ತಲೆಯನ್ನು ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ ಕೋಡಿಯಲ್ಲಿ ತೇಲಿ ಬಿಟ್ಟಿದ್ದಾರೆ. ಕೋಣವನ್ನು ದಲಿತ ಸಮುದಾಯದವರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಕೋಣನ ಬಲಿಯನ್ನು ಗೌರಿ ಹಬ್ಬದಂದು ದುರ್ಗಮ್ಮನಿಗೆ ಬಲಿ ನೀಡಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮದಲೂರು ಕೆರೆ ಕೋಡಿ ಬಳಿ ಇರುವ ದುರ್ಗಮ್ಮನಿಗೆ ಮತ್ತು ಕೆರೆ ಕೋಡಿಬಿದ್ದಿರುವ ಸಂದರ್ಭದಲ್ಲಿ ಕೋಣನ ಬಲಿ ನೀಡಲಾಗುತ್ತದೆ. ಹಿಂದೆಯೂ ಕೆಲವು ಬಾರಿ ಕೋಣನ ಬಲಿ ನೀಡಲಾಗಿದೆ. ಯಾರಿಗೂ ಗೊತ್ತಾಗದಂತೆ ಬೆಳಗಿನಜಾವದಲ್ಲಿ ಕೋಣನ ಬಲಿ ನೀಡಲಾಗುತ್ತದೆ ಎಂದು ಸ್ಥಳೀಯರು ದಿ ನ್ಯೂಸ್ ಕಿಟ್ ಗೆ ತಿಳಿಸಿದ್ದಾರೆ.

ಮದಲೂರು ಕೆರೆ ಈ ಬಾರಿ ಸುರಿದ ಭಾರೀ ಮಳೆಗೆ ತುಂಬಿ ಕೋಡಿ ಬಿದ್ದಿದೆ. ನೈಸರ್ಗಿಕ ಹಳ್ಳಗಳಿಂದ ಹರಿದು ಬಂದ ನೀರಿನಿಂದ ಮದಲೂರು ಕೆರೆ ಕೋಡಿ ಬಿದ್ದಿದ್ದು, ಇದಕ್ಕೆ ಆಹುತಿಯಾಗಿ ಕೋಣನ ಬಲಿ ನೀಡಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular