ಜಾರ್ಖಂಡ್ ನ ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್ ಮೈತ್ರಿ ನಾಯಕರು ಗುರುವಾರ ರಾಜ್ಯಪಾಲ ರಮೇಶ್ ಟೈಸ್ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಚುನಾವಣಾ ಆಯೋಗ ಅನರ್ಹಗೊಳಿಸಿದೆ ಎಂಬ ಗಾಳಿಸುದ್ದಿಯನ್ನು ತೆರವುಗೊಳಿಸಿ ಎಂದು ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು.
ಚುನಾವಣಾ ಆಯೋಗ ಸೊರೆನ್ ಅವರನ್ನು ಶಾಸಕರಾಗಿ ಅನರ್ಹಗೊಳಿಸಿದೆ ಎಂದು ರಾಭವನದ ಮೂಲಗಳನ್ನು ಉಲ್ಲೇಖಿಸಿ ಪ್ರಸಾರವಾದ ವಿವಿಧ ಸುದ್ದಿ ವರದಿಗಳನ್ನು ಉಲ್ಲೇಖಿಸಿ ಮನವಿ ಸಲ್ಲಿಸಿದ್ದಾರೆ.
ರಾಜ್ಯಪಾಲರ ಕಚೇರಿಯಿಂದ ಸೋರಿಕೆಯಾಗಿರುವ ಮಾಹಿತಿಗಳು ರಾಜ್ಯದ ಆಡಳಿತದಲ್ಲಿ ಅವ್ಯವಸ್ಥೇ, ಗೊಂದಲ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸುತ್ತಿವೆ ಎಂದು ಮೈತ್ರಿ ನಾಯಕರು ಹೇಳಿದರು.
ಆದಾಗ್ಯೂ ಎಲ್ಲ ಗೊಂದಲಗಳನ್ನು ನಿವಾರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯಪಾಲರು ಮೈತ್ರಿ ನಾಯಕರಿಗೆ ಭರವಸೆ ನೀಡಿದರು ಎಂದು ಕಚೇರಿಯ ಹೇಳಿಕೆ ತಿಳಿಸಿದೆ.