ಜುಲೈ 18ರಿಂದ ಪ್ರಾರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೆಲವು ಅಸಂಸದೀಯ ಪದಗಳನ್ನು ಬಳಸುವಂತಿಲ್ಲ ಎಂಬ ಕಿರುಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಮುಂದೆ ಭ್ರಷ್ಟ, ಅಸಮರ್ಥ ಎಂಬ ಪದಗಳನ್ನು ರಾಜ್ಯಸಭೇ ಮತ್ತು ಲೋಕಸಭೆಯಲ್ಲಿ ಬಳಸಲಾಗುವುದಿಲ್ಲ. ಆದರೆ ಈ ಪದಗಳನ್ನು ಕಡತದಿಂದ ತೆಗೆದುಹಾಕಬೇಕೇ ಬೇಡವೇ ಎಂಬುದನ್ನು ಸಭಾಧ್ಯಕ್ಷರು ತೀರ್ಮಾನಿಸುತ್ತಾರೆ.
ಕುತೂಹಲಕಾರಿ ವಿಷಯವೆಂದರೆ ಸಂಸತ್ತಿನಲ್ಲಿ ಬಳಕೆಗೆ ನಿಷೇಧಿತ ಪದಗಳು ಪ್ರಸ್ತುತ ಆಡಳಿತವನ್ನು ವಿವರಿಸಲು ಬಳಸುವ ಪದಗಳಾಗಿದ್ದು ಜುಮ್ಲಾಜೀವಿ, ಅಸಮರ್ಥ, ಭ್ರಷ್ಟ, ಚೇಲಾಗಳು, ಸರ್ವಾಧಿಕಾರಿ, ದಲಾಲ್ ಪದಗಳನ್ನು ಬಳಸುವಂತಿಲ್ಲ.
ಅಷ್ಟೇ ಅಲ್ಲ, ನಾಚಿಕೆ, ನಿಂದನೆ, ದ್ರೋಹ, ಭ್ರಷ್ಟ, ನಾಟಕ, ಬೂಟಾಟಿಕೆ, ಅಸಮರ್ಥ, ಬಾಲ್ ಬುದ್ದಿ, ಕೋವಿಡ್ ಸ್ಪ್ರೆಡರ್, ದ್ರೋಹ್ರ ಚರಿತ, ನಿಕಮ್, ನೌಟಂಕಿ, ದಿಂಡೋರ ಪೀಟ್ನಾ, ಬೆಹ್ರಿ ಸರ್ಕಾರ ಮುಂತಾದ ಹಲವು ಪದಗಳು ಈಗ ಅಸಂಸದೀಯ ಎಂದು ಕರೆಯಲ್ಪಡುತ್ತವೆ ಎಂದು ಜಿಗ್ನೇಶ್ ಮೇವಾನಿ ಟ್ವೀಟ್ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಾಸ್ಯಾಸ್ಪದ ಸಂಗತಿಯೆಂದರೆ ಈಗ ಅಸಂಸದೀಯವೆಂದು ಘೋಷಿಸಲ್ಪಟ್ಟಿರುವ ಕೆಲವು ಪದಗಳು ಮತ್ತು ಅಭಿವ್ಯಕ್ತಿಗಳು ನಮ್ಮ ಕನಸಿನಲ್ಲೂ ನಾವು ಊಹಿಸಿರದಂತಹವುಗಳಾಗಿವೆ. ಚಮಚಗಿರಿ, ಶಕುನಿ, ಹುಚ್ಚುತನದ ಮನೆಗಳಿಂದ ನಿಷೇಧಿಸದಲಾಗಿದೆ.
ಈಗ ಸಂಸತ್ತಿನಲ್ಲಿ ಭಾಷಣ ಮಾಡುವಾಗ ಈ ಮೂಲಭೂತ ಪದಗಳನ್ನು ಬಳಸಲು ನಮಗೆ ಅನುಮತಿಸುವುದಿಲ್ಲ. ನಾಚಿಕೆಪಡುತ್ತೇನೆ ಎಂಬುದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ದ್ರೋಹ ಮಾಡಿದೆ, ಭ್ರಷ್ಟ ಬೂಟಾಟಿಕೆ, ಅಸಮರ್ಥ. ನಾನು ಈ ಎಲ್ಲಾ ಪದಗಳನ್ನು ಬಳಸುತ್ತೇನೆ. ನನ್ನನ್ನು ಅಮಾನತು ಮಾಡಿ. ಪ್ರಜಾಪ್ರಭುತ್ವಕ್ಕಾಗಿ ಹೋರಾಟ ಮುಂದುವರಿಸುತ್ತೇನೆ ಎಂದು ಟಿಎಂಸಿ ನಾಯಕ ಡೆರೇಕ್ ಓಬ್ರಿಯನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಸುದ್ದಿಯನ್ನು ನಾಗರಿಕರು, ಪತ್ರಕರ್ತರು ಮತ್ತು ರಾಜಕೀಯ ನಾಯಕರು ಸಮಾನವಾಗಿ ಸ್ವೀಕರಿಸಿಲ್ಲ. ನಿಮ್ಮ ಪ್ರಕಾರ ನಾನು ಲೋಕಸಭೆಯಲ್ಲಿ ಎದ್ದು ನಿಲ್ಲಲು ಸಾಧ್ಯವಿಲ್ಲ. ಅವರ ಬೂಟಾಟಿಕೆಗೆ ನಾಚಿಕೆಪಡಬೇಕಾದ ಅಸಮರ್ಥ ಸರ್ಕಾರದಿಂದ ಭಾರತೀಯರಿಗೆ ಹೇಗೆ ದ್ರೋಹ ಬಗೆದಿದೆ ಎಂದು ಮಾತನಾಡಲು ಆಗುವಿದಿಲ್ಲ ಎಂದಿದ್ದಾರೆ.
ಅಸಂಸದೀಯ ಪದಗಳ ಪಟ್ಟಿ ಹೀಗಿದೆ.
ರಕ್ತಸಿಕ್ತ, ನಾಚಿಕೆ, ದುರುಪಯೋಗ, ಗಿರ್ಗಿಟ್, ಗದ್ದರ್, ಅರಾಜಕತಾವಾಧಿ, ಬಾಲಿಶ, ಅವಮಾನ, ಕತ್ತೆ, ಮೀಠಿ, ಗೂಂಡಾಗಿರಿ, ಹೇಡಿ, ತಪ್ಪುದಾರಿ, ಸುಳ್ಳು, ಅಸತ್ಯ, ಮೊಸಳೆ ಕಣ್ಣೀರು, ಅಸತ್ಯ, ಅಹಂಕಾರ, ಕಾಲಾ ದಿನ, ದಂಗಾ, ದ್ರೋಹ ಚರಿತ್ರೆ, ಬೇಚಾರ, ಬಾಬ್ ಕಟ್, ಲಾಲಿಪಾಪ್, ಮೂರ್ಗ, ಲೈಂಗಿಕ ಕಿರುಕುಳ ಮೊದಲಾದ ಪದಗಳು ಅಸಂಸದೀಯ ಪದಗಳಾಗಿದ್ದು ಅಧಿವೇಶನದಲ್ಲಿ ಈ ಪದಗಳನ್ನು ಬಳಸಿ ಮಾತನಾಡುವಂತಿಲ್ಲ ಎಂದು ಬಿಜೆಪಿ ಸರ್ಕಾರ ಹೇಳಿದೆ.