Monday, September 16, 2024
Google search engine
Homeಮುಖಪುಟಗುಂಡು ಹಾರಿಸಿ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆ

ಗುಂಡು ಹಾರಿಸಿ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆ

ಪಶ್ಚಿಮ ಜಪಾನ್ ನ ನಾರಾ ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಗುಂಡು ಹಾರಿಸಿ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಮಾಧ್ಯಗಳು ವರದಿ ಮಾಡಿವೆ.

67 ವರ್ಷದ ಅಬೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.

ಶಿಂಜೋ ಅಬೆ ಅವರ ಕುತ್ತಿಗೆ ಬಲಭಾಗದಲ್ಲಿ ಮತ್ತು ಎಡಭಾಗದ ಕವಚಕ್ಕೆ ಗಾಯವಾಗಿದೆ ಎಂದು ನಾರಾ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನಾರಾ ಸಿಟಿಯ ನಿವಾಸಿ ಎಂದು ಹೇಳಲಾದ 41 ವರ್ಷದ ಟೆಟ್ಸುಯಾ ಯಮಗಾಮಿ ಎಂಬಾತ ಅಬೆ ಮೇಲೆ ಗುಂಡು ಹಾರಿಸಿದ್ದು ಕೊಲೆ ಯತ್ನದ ಆರೋಪದ ಮೇಲೆ ಯಮಗಾಮಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಜಪಾನಿನ ಮಾಧ್ಯಮ ಸಂಸ್ಥೆ ಎನ್ಎಚ್.ಕೆ ವರದಿ ಮಾಡಿದೆ.

ಹೋಮ್ ಮೇಡ್ ಗನ್ ನಿಂದ ಅಬೆ ಹಿಂದಿನಿಂದ ಮಾಜಿ ಪ್ರಧಾನಿಯತ್ತ ಗುಂಡು ಹಾರಿಸಿದ್ದಾನೆ. ದಾಳಿಗೆ ಕಾರಣ ಇನ್ನೂ ದೃಢಪಟ್ಟಿಲ್ಲ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.

ಅಬೆ ಮೇಲಿನ ದಾಳಿಯಿಂದ ತೀವ್ರ ನೋವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಟಿವಿಯಲ್ಲಿ ಪ್ರಸಾರವಾದ ದೃಶ್ಯಗಳಲ್ಲಿ ಅಬೆ ಬೀದಿಯಲ್ಲಿ ಕುಸಿದು ಬೀಳುತ್ತಿರುವ ದೃಶ್ಯಗಳು ಇವೆ. ಹಲವಾರು ಭದ್ರತಾ ಸಿಬ್ಬಂದಿಗಳು ಅವರ ಕಡೆಗೆ ಓಡುತ್ತಿರುವ ದೃಶ್ಯಗಳು ಇವೆ ಎಂದು ವರದಿಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular