ರಾಜಸ್ಥಾನ, ಹರಿಯಾಣ, ಕರ್ನಾಟಕ ಮತ್ತು ಮಹಾರಾಷ್ಟ್ರ ಈ ನಾಲ್ಕು ರಾಜ್ಯಗಳಲ್ಲಿ ರಾಜ್ಯಸಭೆಯಲ್ಲಿ ಖಾಲಿ ಇರುವ 16 ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆಯಿತು.
ಎರಡು ಕಾಂಗ್ರೆಸ್ ಶಾಸಕರ ಮತಗಳು ಗೌಪ್ಯ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ವಿವಾದಕ್ಕೆ ಕಾರಣವಾಗಿದ್ದು ಹರಿಯಾಣದ ಎರಡು ರಾಜ್ಯಸಭಾ ಸ್ಥಾನಗಳ ಮತ ಎಣಿಕೆಯಲ್ಲಿ ವಿಳಂಬವಾಗಿದೆ.
ಆಡಳಿತಾರೂಢ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಚುನಾವಣಾಧಿಕಾಯು ನ್ಯಾಯಯುತ ಮತದಾನ ನಡೆಸಲಿಲ್ಲ ಎಂದು ಆರೋಪಿಸಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ ಮತದಾನವು ಸಂಪೂರ್ಣವಾಗಿ ನ್ಯಾಯಯುತವಾಗಿದೆ. ಇದು ಬಿಜೆಪಿ ಅನುಸರಿಸುತ್ತಿರುವ ತಂತ್ರ ಎಂದು ವಾಗ್ದಾಳಿ ನಡೆಸಿದೆ.
15 ರಾಜ್ಯ ಮೇಲ್ಮನೆಯಲ್ಲಿ 57 ಸ್ಥಾನಗಳಿಗೆ ತುಂಬಲು ರಾಜ್ಯಸಭೆಗೆ ದ್ವೈವಾರ್ಷಿಕ ಚುನಾವಣೆಗಳು ನಡೆದವು. ಅದರಲ್ಲಿ ಆಂಧ್ರಪ್ರದೇಶ, ಛತ್ತೀಸ್ ಗಢ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ಸೇರಿವೆ.
11 ರಾಜ್ಯಗಳಲ್ಲಿ ವಿವಿ ಪಕ್ಷಗಳಿಗೆ ಸೇರಿದ 41 ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದಿದ್ದಾರೆ.
ಕಾರ್ತಿಕೇಯ ಶರ್ಮಾ ಅವರು ಸೋಲುವ ಭೀತಿ ಅರಿತುಕೊಂಡಿದ್ದು, ಮತದಾನದ ಫಲಿತಾಂಶಗಳನ್ನು ಪಡೆಯಲು ತಂತ್ರಗಳನ್ನು ಬಳಸುತ್ತಿದ್ದಾರೆ. ಬಿಬಿ ಬಾತ್ರಾ ಮತ್ತು ಕಿರಣ್ ಚೌಧರಿ ಅವರು ಪಡೆದ ಎರಡೂ ಮತಗಳನ್ನು ಚುನಾವಣಾಧಿಕಾರಿ ಮಾನ್ಯ ಮಾಡಿದ್ದಾರೆ. ಕಾರ್ತಿಕೇಯ ಶರ್ಮಾ ಮತ್ತು ಬಿಜೆಪಿಯವರು ಎತ್ತಿದ್ದ ಆಕ್ಷೇಪಗಳನ್ನು ಚುನಾವಣಾಧಿಕಾರಿ ತಳ್ಳಿಹಾಕಿದ್ದಾರೆ ಎಂದು ಮಾಕೆನ್ ಪತ್ರದಲ್ಲಿ ಬರೆದಿದ್ದಾರೆ.