ಮೊಬೈಲ್ ಫೋನ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ತನ್ನ ತಾಯಿಯನ್ನೇ ಕೊಂದ ಆರೋಪದ ಮೇಲೆ 26 ವರ್ಷದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮೈಲಸಂದ್ರದ ಲೂಕಾಸ್ ಲೇಔಟ್ ನಿವಾಸಿ ದೀಪಕ್ ಎಂದು ಗುರುತಿಸಲಾಗಿದೆ.
ದೀಪಕ್ ಜೂನ್ 1ರಂದು ತನ್ನ ತಾಯಿ ಫಾತಿಮಾ ಮೇರಿ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಆರೋಪಿಯ ಸಹೋದರಿ ಜಾಯ್ಸ್ ಮೇರಿ ತನ್ನ ತಾಯಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ಫಾತಿಮಾ ಮೇರಿ ಸೊಪ್ಪನ್ನು ಮಾರಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ದಿನನಿತ್ಯದಂತೆ ಸೊಪ್ಪು ಸಂಗ್ರಹಿಸಲು ಜಮೀನಿಗೆ ತೆರಳಿದ್ದರು. ಜಾಯ್ಸ್ ಮೇರಿ ತನ್ನ ತಾಯಿಯನ್ನು ಜಮೀನಿನಿಂದ ಹಿಂತಿರುಗುವಂತೆ ತನ್ನ ಸಹೋದರನನ್ನು ಕೇಳಿದ್ದಳು.
ದೀಪಕ್ ತಂದೆ ಅರೋಗ್ಯಸ್ವಾಮಿಗೆ ಕರೆ ಮಾಡಿ ತಾಯಿ ರಸ್ತೆಬದಿ ಕುಸಿದು ಬಿದ್ದಿದ್ದಾರೆ ಎಂದು ತಿಳಿಸಿದ್ದರು. ಆದರೆ ವಿಚಾರಣೆ ವೇಳೆ ತನ್ನ ತಾಯಿಯನ್ನೇ ಕೊಂದಿರುವುದಾಗಿ ದೀಪಕ್ ಒಪ್ಪಿಕೊಂಡಿದ್ದ.
ದೀಪಕ್ ತನ್ನ ತಾಯಿಯನ್ನು ಭೇಟಿಯಾದ ನಂತರ ತನೆಗೆ ಮೊಬೈಲ್ ಫೋನ್ ಖರೀದಿಸಿ ಕೊಡುವಂತೆ ಒತ್ತಾಯಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೊಬೈಲ್ ಖರೀದಿಸಲು ತನ್ನ ಬಳಿ ಹಣವಿಲ್ಲ ಎಂದು ತಾಯಿ ಹೇಳಿದ್ದರು.
ಇದರಿಂದ ಕೋಪಗೊಂಡ ಪುತ್ರ ದೀಪಕ್ ತಾಯಿಯ ಸೀರೆಯಿಂದ ಕತ್ತು ಹಿಸುಕಿ ಕೊಂದಿದ್ದಾನೆ. ಆಕೆಯನ್ನು ಕೊಂದ ಆರೋಪಿ ಆಕೆಯಿಂದ 700 ರೂಪಾಯಿ ಹಣ ಪಡೆದು ಸ್ಥಳದಿಂದ ಪರಾರಿಯಾಗಿದ್ದರು.