ರಾಜಸ್ಥಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನ ಚಿಂತನ ಶಿಬಿರದ ನಡುವೆಯೇ ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನಿಲ್ ಜಾಖರ್ ಪಕ್ಷ ತೊರೆಯುವ ನಿರ್ಧಾರವನ್ನು ಶನಿವಾರ ಪ್ರಕಟಿಸಿದ್ದಾರೆ.
ವರದಿಗಳ ಪ್ರಕಾರ ತಮ್ಮ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕ್ರಮ ತೆಗೆದುಕೊಳ್ಳುವ ಮಾಹಿತಿ ಲಭ್ಯವಾಗಿರುವುದರಿಂದ ಇದರ ವಿರುದ್ಧ ಜಾಖರ್ ಅಸಮಾಧಾನಗೊಂಡಿದ್ದಾರೆ.
ಇತ್ತೀಚೆಗಷ್ಟೇ ನಡೆದ ರಾಜ್ಯ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಪಂಜಾಬ್ ನಲ್ಲಿ ಹಿಂದೂ ಮುಖ್ಯಮಂತ್ರಿ ಆಗಿದ್ದರ ಪರಿಣಾಮಗಳ ಕುರಿತು ಪಕ್ಷದ ಹಿರಿಯ ನಾಯಕಿ ಅಂಬಿಕಾ ಸೋನಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಗುರುದಾಸ್ ಪುರದ ಮಾಜಿ ಸಂಸದ ಮತ್ತು ಪಕ್ಷದ ನಾಯಕ ದೆಹಲಿಯಲ್ಲಿ ಕುಳಿತು ಪಂಜಾಬ್ ಘಟಕವನ್ನು ಹಾಳು ಮಾಡಿದ್ದಾರೆ ಎಂದು ಟೀಕೆ ವ್ಯಕ್ತಪಡಿಸಿದ್ದರು.
ನಿಮ್ಮ ಸಿದ್ದಾಂತದಿಂದ ದೂರ ಸರಿಯಬೇಡಿ ಎಂದು 68 ವರ್ಷದ ಜಾಖರ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಲಹೆ ನೀಡಿದ್ದಾರೆ.
ಪಕ್ಷದ ಮುಖಂಡರಾದ ಹರೀಶ್ ಚೌಧರಿ, ಪಂಜಾಬ್ ಮಾಜಿ ಉಸ್ತುವಾರಿ ಹರೀಶ್ ರಾವತ್ ಮತ್ತು ತಾರಿಕ್ ಅನ್ವರ್ ಅವರನ್ನು ಗುರಿಯಾಗಿಸಿಕೊಂಡು ಆರೋಪ ಮಾಡಿದ್ದಾರೆ.
ಜಾಕರ್ ಅವರು ರಾಹುಲ್ ಗಾಂಧಿಯನ್ನು ಒಳ್ಳೆಯ ವ್ಯಕ್ತಿ ಎಂದು ಕರೆದಿದ್ದಾರೆ. 51 ವರ್ಷ ವಯಸ್ಸಿನವರಿಗೆ ಪಕ್ಷದ ಆಡಳಿತವನ್ನು ತಮ್ಮ ಕೈಯಲ್ಲಿ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಜಾಖರ್ ರಾಜಿನಾಮೆ ನಿರ್ಧಾರದ ಮಾಹಿತಿ ಚಿಂತನ ಶಿಬಿರದಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.