ಹಿರಿಯ ಸಮಾಜವಾದಿ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ನವದೆಹಲಿಯಲ್ಲಿಂದು ತಮ್ಮ ಲೋಕತಾಂತ್ರಿಕ ಜನತಾ ದಳ ಪಕ್ಷವನ್ನು ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರಿಯ ಜನತಾ ದಳದಲ್ಲಿ ವಿಲೀನಗೊಳಿಸಿದರು. 25 ವರ್ಷಗಳ ನಂತರ ಇಬ್ಬರು ನಾಯಕರು ಒಂದಾಗಿದ್ದಾರೆ.
ಇಂದು ನಮಗೆ ಯುವಕರ ಅಗತ್ಯವಿದೆ. ಆರ್.ಜೆಡಿ ನಿಮ್ಮ ಪಕ್ಷ ಅದನ್ನು ನೀವು ಬಲಪಡಿಸಬೇಕು. ಅವನ ಕೈಗಳನ್ನು ಬಲಗೊಳಿಸಿ ನಾನು ಮೊದಲಿನಂತೆ ಕ್ರಿಯಾಶೀಲನಾಘಲು ಸಾಧ್ಯವಿಲ್ಲ. ಆದರೆ ನಾನು ಅವರನ್ನು ಬಲಪಡಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ನಮ್ಮ ಹೋರಾಠವನ್ನು ಬಲಪಡಿಸಲು ನಾವು ಅಖಿಲೇಶ್ ಅವರೊಂದಿಗೆ ಮಾತನಾಡುತ್ತೇವೆ. ಲಾಲೂ ಪ್ರಸಾದ್ ಅವರು ಒಂದು ದಿನ ಸ್ವತಂತ್ರವಾಗಿ ನಡೆಯುತ್ತಾರೆ ಎಂದು ನಾನು ನಂಬುತ್ತೇನೆ. ಕೋಮುವಾದಿ ಶಕ್ತಿಗಳೊಂದಿಗೆ ರಾಜಿ ಮಾಡಿಕೊಂಡಿದ್ದರೆ ಅವರು ಜೈಲಿನಲ್ಲಿ ಇರುತ್ತಿರಲಿಲ್ಲ ಎಂದು ಶರದ್ ಯಾದವ್ ಹೇಳಿದ್ದಾರೆ.
ಬಿಹಾರದ ಹಿರಿಯ ಸಮಾಜವಾದಿ ನಾಯಕ ಶರದ್ ಯಾದವ್ ತಮ್ಮ ಪಕ್ಷ ಲೋಕತಾಂತ್ರಿಕ ಜನತಾ ದಳವನ್ನು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳದೊಂದಿಗೆ ವಿಲೀನಗೊಳಿಸಿದರು.
ಆರ್.ಜೆ.ಡಿ ನಾಯಕ ಮತ್ತು ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್, ದೇಶಾದ್ಯಂತ, ದ್ವೇಷವನ್ನು ಹರಡಲಾಗುತ್ತಿದೆ. ಸಹೋದರತ್ವ ಅಪಾಯದಲ್ಲಿದೆ. ಬೆಲೆ ಏರಿಕೆ ವಾಸ್ತವವಾಗಿದೆ. ಸಂವಿಧಾನಿಕ ಸಂಸ್ಥೆಗಳನ್ನು ಪಕ್ಷದ ಕೋಶಗಳಿಗೆ ಇಳಿಸಲಾಗುತ್ತಿದೆ. ನಿರುದ್ಯೋಗ, ಹಣದುಬ್ಬರದ ಪ್ರಶ್ನೆಗಳನ್ನು ಜನರು ಎತ್ತುತ್ತಿದ್ದು ಅವರನ್ನು ಹತ್ತಿಕ್ಕಲಾಗುತ್ತಿದೆ. ಶರದ್ ಯಾದವ್ ನಿರ್ಧಾರ ನಮಗೆ ಶಕ್ತಿ ಮತ್ತು ವಿಶ್ವಾಸ ನೀಡುತ್ತದೆ ಎಂದು ಹೇಳಿದರು.
ನಾವು ಈಗಾಗಲೇ ತಡವಾಗಿ ಓಡುತ್ತಿದ್ದೇಔಎ ಎಂಬ ಸಂದೇಶವನ್ನು ಇದು ಎಲ್ಲಾ ವಿರೋಧ ಪಕ್ಷಗಳಿಗೆ ರವಾನಿಸುತ್ತಿದೆ. 2019ರ ನಂತರವೇ ನಾವು ಒಂದಾಗಬೇಕಿತ್ತು. ಸಮಾಜವಾದಿ ಶಕ್ತಿಗಳು ಕೈಜೋಡಿಸಿದರೆ ಕೋಮುವಾದಿ ಶಕ್ತಿಗಳನ್ನು ಕಿತ್ತೊಗೆಯಲು ಸಾಧ್ಯವಾಗುತ್ತದೆ. ಅಲ್ಪಸಂಖ್ಯಾತರ ಮತದಾನದಿಂದ ವಂಚಿತರಾಗಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ. ನಾವು ಇದನ್ನು ಎಂದಿಗೂ ಮಾಡಲು ಬಿಡುವುದಿಲ್ಲ ಎಂದು ತೇಜಸ್ವಿ ಯಾದವ್ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಆರ್.ಜೆ.ಡಿ. ರಾಜ್ಯಸಭಾ ಸಂಸದ ಮನೋಜ್ ಝಾ ಈ ಕ್ರಮವು ನಮ್ಮ ಪಕ್ಷವನ್ನು ಬಲಪಡಿಸುತ್ತದೆಯೇ ಎಂದು ಜನರು ನನ್ನನ್ನು ಕೇಳುತ್ತಾರೆ. ಇದು ಸಮಾಜವಾದಿ ರಾಜಕೀಯ ಮತ್ತು ಸಾಮಾಜಿಕ ನ್ಯಾಯದ ರಾಜಕೀಯವನ್ನು ಬಲಪಡಿಸುತ್ತದೆ ಎಂದು ಅವರಿಗೆ ಹೇಳಲು ಬಯಸುತ್ತೇನೆ ಎಂದರು.