Friday, October 18, 2024
Google search engine
Homeಮುಖಪುಟಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುಕುಲ್ ವಾಸ್ನಿಕ್ ಹೆಸರು ಪ್ರಸ್ತಾಪ - ಅಂಗೀಕಾರ ಇಲ್ಲ

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುಕುಲ್ ವಾಸ್ನಿಕ್ ಹೆಸರು ಪ್ರಸ್ತಾಪ – ಅಂಗೀಕಾರ ಇಲ್ಲ

ಸಭೆಯಲ್ಲಿ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಶಕ್ತಿಸಿನ್ಹಾ ಗೋಹಿಲ್, ದಿನೇಶ್ ಗುಂಡೂರಾವ್, ರಾಜೀವ್ ಶುಕ್ಲಾ, ಅಂಬಿಕಾ ಸೋನಿ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಸೇರಿದಂತೆ ಪ್ರಮುಖ ನಾಯರು ಸೇರಿದ್ದಾರೆ.

ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಕುರಿತು ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದೆ. ದೇಶದ ರಾಜಧಾನಿ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಸಭೆ ನಡೆಯುತ್ತಿದೆ.

ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಅಜಾದ್, ದಿಗ್ವಿಜಯ ಸಿಂಗ್, ಪಿ.ಚಿದಂಬರಂ, ಹರೀಶ್ ರಾವತ್, ಆನಂದ್ ಶರ್ಮಾ, ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್ ಸಭೆಯಲ್ಲಿ ಇದ್ದಾರೆ.

ಸಭೆಯಲ್ಲಿ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಶಕ್ತಿಸಿನ್ಹಾ ಗೋಹಿಲ್, ದಿನೇಶ್ ಗುಂಡೂರಾವ್, ರಾಜೀವ್ ಶುಕ್ಲಾ, ಅಂಬಿಕಾ ಸೋನಿ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಸೇರಿದಂತೆ ಪ್ರಮುಖ ನಾಯರು ಸೇರಿದ್ದಾರೆ.

ಸಭೆಗೆ ಮುಂಚಿತವಾಗಿ ಪಕ್ಷದೊಳಗಿನ ಭಿನ್ನಮತೀಯ ಗುಂಪು ಜಿ-23 ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮುಕುಲ್ ವಾಸ್ನಿಕ್ ಅವರನ್ನು ಸೂಚಿಸಿದೆ. ಆದರೆ ಅದನ್ನು ಅಂಗೀಕರಿಸಲಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಅದೇ ಮೂಲಗಳ ಪ್ರಕಾರ ಆನಂದ್ ಶರ್ಮಾ, ಗುಲಾಂ ನಬಿ ಅಜಾದ್, ಕಪಿಲ್ ಸಿಬಲ್ ಅವರನ್ನೊಳಗೊಂಡ ಜಿ23 ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮುಕುಲ್ ವಾಸ್ನಿಕ್ ಅವರ ಹೆಸರನ್ನು ಸೂಚಿಸಿತ್ತು. ಆದರೆ ಅದನ್ನು ಅಂಗೀಕರಿಸಲಾಗಿಲ್ಲ. ಜಿ23 ಭಾಗವಾಗಿರುವ 2000 ಇಸವಿಯ ಆರಂಭದಲ್ಲಿ ಸೋನಿಯಾ ಗಾಂಧಿ ನಡೆಸಿದ ರೀತಿಯಲ್ಲಿ ಪಕ್ಷದ ಹೊಸ ಅಧ್ಯಕ್ಷರು ಪಕ್ಷದವನ್ನು ಮುನ್ನಡೆಸಬೇಕು ಎಂದು ಹೇಳಿದ್ದಾರೆ.

ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿದ್ದರೂ ಅದನ್ನು ಕೆ.ಸಿ. ವೇಣುಗೋಪಾಲ್, ಅಜಯ್ ಮಾಕನ್ ಮತ್ತು ದಣದೀಪ್ ಜುರ್ಜೆವಾಲ್ ನಡೆಸುತ್ತಿದ್ದಾರೆ. ಅವರ ಮೇಲೆ ಯಾವುದೇ ಹೊಣೆಗಾರಿಕೆಯನ್ನು ನಿಗದಿಪಡಿಸಲಾಗಿಲ್ಲ. ರಾಹುಲ್ ಗಾಂಧಿ ಅಧ್ಯಕ್ಷರಲ್ಲ. ಆದರೆ ಅವರು ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಬಹಿರಂಗವಾಗಿ ಸಂವಹನ ಮಾಡುವುದಿಲ್ಲ. ನಾವು ಪಕ್ಷದ ಹಿತೈಷಿಗಳು ಶತ್ರುಗಳಲ್ಲ ಎಂದು ವರದಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular