ಮೈಸೂರಿನ ಅಭಿರುಚಿ ಪ್ರಕಾಶನ ಹೊರತಂದಿರುವ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಸಮಗ್ರ ಸಾಹಿತ್ಯ ಬೆವರು ನನ್ನ ದೇವರು ಸಂಪುಟಗಳ ಜನಾರ್ಪಣೆ ಕಾರ್ಯಕ್ರಮವನ್ನು ಮಾರ್ಚ್ 12ರಂದು ಬೆಂಗಳೂರಿನ ಗಾಂಧೀ ಭವನದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 11 ಗಂಟೆಗೆ ಪ್ರಸಿದ್ದ ವಿಮರ್ಶಕ ಎಚ್.ಎಸ್.ರಾಘವೇಂದ್ರ ರಾವ್ ಸಾಹಿತ್ಯ ಸಂಪುಟಗಳ ಜನಾರ್ಪಣೆಗೊಳಿಸಲಿದ್ದು ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್.ಎಸ್.ನಾಗಮೋಹನ್ ದಾಸ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ವಿಮರ್ಶಕ ಬಸವರಾಜ್ ಕಲ್ಗುಡಿ ಭಾಗವಹಿಸುವರು.
ಮಧ್ಯಾಹ್ನ 2.30ಕ್ಕೆ ಮಹಿಳಾ ಕವಿಗೋಷ್ಠಿ ನಡೆಯಲಿದ್ದು, ತಾರಿಣಿ ಶುಭದಾಯಿನಿ ಆಶಯ ನುಡಿಗಳನ್ನಾಡುವರು. ದು.ಸರಸ್ವತಿ ಅಧ್ಯಕ್ಷತೆ ವಹಿಸುವರು.
ಲೇಖಕಿಯರಾದ ಇಂದಿರಾ ಕೃಷ್ಣಪ್ಪ, ಮುಮ್ತಾಜ್ ಬೇಗಂ, ಎನ್.ಕೆ.ಲೋಲಾಕ್ಷಿ, ಕೆ.ಶರೀಫಾ, ಗೀತಾ ವಸಂತ, ಬಾ.ಹ.ರಮಾಕುಮಾರಿ, ಸುಧಾ ಚಿದಾನಂದಗೌಡ, ಶೋಭಾ ನಾಯಕ್, ಬಿ.ಎಸ್. ಮಧುಮತಿ, ಅನಸೂಯ ಕಾಂಬ್ಳೆ, ಎಚ್.ಎನ್. ಆರತಿ, ಅಶ್ವಿನಿ ಮದನಕರ್, ಸುಜಾತ ಲಕ್ಷ್ಮೀಪುರ್, ಮಮತ ಅರಸೀಕೆರೆ, ಡಿ.ಅರುಂಧತಿ, ಮಲ್ಲಿಕಾ ಬಸವರಾಜು ಕವಿತೆಗಳನ್ನು ವಾಚನ ಮಾಡಲಿದ್ದಾರೆ.
ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ ಪ್ರದಾನ ಸಮಾಂಭ ನಡೆಯಲಿದ್ದು, ಎಚ್.ಟಿ.ಪೋತೆ, ಕೇಶವ ಶರ್ಮಾ, ಮಲ್ಲಿಕಾರ್ಜುನ ಹಿರೇಮಠ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸುಂದರರಾಜ್, ಎಚ್.ಎಲ್.ಪುಷ್ಪ ಮುಖ್ಯ ಅತಿಥಿಗಳಾಗಿದ್ದು, ಬರಗೂರು ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಅಧ್ಯಕ್ಷತೆ ವಹಿಸುವರು.
ಬರಗೂರರ ಇತ್ತೀಚಿನ ಸಿನಿಮಾಗಳಲ್ಲಿ ಪ್ರಶಸ್ತಿ ಪುರಸ್ಕೃತರಾದ ಹರಿಪ್ರಿಯ, ಕುಮಾರ್ ಗೋವಿಂದ್, ರೇಖಾ, ಶಮಿತಾ ಮಲ್ನಾಡ್ ಅವರಿಗೆ ಸಂತೋಷಾಭಿನಂದನೆ ಏರ್ಪಡಿಸಿದೆ.