Friday, October 18, 2024
Google search engine
Homeಮುಖಪುಟಸ್ಥಳೀಯ ಸಂಸ್ಥೆಗಳ ಚುನಾವಣೆ - ಡಿಎಂಕೆ ಮೈತ್ರಿಗೆ ಭರ್ಜರಿ ಗೆಲುವು

ಸ್ಥಳೀಯ ಸಂಸ್ಥೆಗಳ ಚುನಾವಣೆ – ಡಿಎಂಕೆ ಮೈತ್ರಿಗೆ ಭರ್ಜರಿ ಗೆಲುವು

ರಾಜ್ಯ ಚುನಾವಣಾ ಆಯೋಗವು 21 ಪಾಲಿಕೆಗಳ 1374ರಲ್ಲಿ 448 ವಾರ್ಡ್ ಸದಸ್ಯ ಸ್ಥಾನಗಳ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಡಿಎಂಕೆ ಮತ್ತು ಮಿತ್ರ ಪಕ್ಷಗಳು 376 ಸ್ಥಾನಗಳಲ್ಲಿ ಗೆದ್ದಿದ್ದರೆ ಎಐಎಡಿಎಂಕೆ 53 ಸ್ಥಾನಗಳನ್ನು ಪಡೆಯಲು ಶಕ್ತವಾಗಿದೆ. ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.

ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಮತ್ತು ಅದರ ಮೈತ್ರಿ ಪಕ್ಷಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.75ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿವೆ.

ರಾಜ್ಯ ಚುನಾವಣಾ ಆಯೋಗವು 21 ಪಾಲಿಕೆಗಳ 1374ರಲ್ಲಿ 448 ವಾರ್ಡ್ ಸದಸ್ಯ ಸ್ಥಾನಗಳ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಡಿಎಂಕೆ ಮತ್ತು ಮಿತ್ರ ಪಕ್ಷಗಳು 376 ಸ್ಥಾನಗಳಲ್ಲಿ ಗೆದ್ದಿದ್ದರೆ ಎಐಎಡಿಎಂಕೆ 53 ಸ್ಥಾನಗಳನ್ನು ಪಡೆಯಲು ಶಕ್ತವಾಗಿದೆ. ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.

ಡಿಎಂಕೆ ಮೈತ್ರಿಕೂಟವು 4287 (65%) ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಎಐಎಡಿಎಂಕೆ 1084 (16%) ಸ್ಥಾನಗಳನ್ನು ಪಡೆದಿದೆ. ಪಟ್ಟಣ ಪಂಚಾಯಿತಿಗಳಲ್ಲಿ ಬಿಜೆಪಿ 135, ಪಿಎಂಕೆ 57, ಡಿಎಂಡಿಕೆ 18, ಎಎಂಎಂಕೆ 57 ಮತ್ತು ಎನ್.ಟಿ.ಕೆ 5 ಸ್ಥಾನಗಳನ್ನು ಗೆದ್ದುಕೊಂಡಿದೆ.

ಡಿಎಂಕೆ ಮತ್ತು ಎಐಎಡಿಎಂಕೆ ಹೊರತುಪಡಿಸಿ ಕಾಂಗ್ರೆಸ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಬಿಜೆಪಿ ಮತ್ತು ಎಎಂಎಂಕೆ ನಂತರ ಸ್ಥಾನವನ್ನು ಕಾಯ್ದುಕೊಂಡಿದೆ.

ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಜಂಟಿ ಸಂಯೋಜಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಎಡಪ್ಪಾಡಿ ಪುರಸಭೆಯನ್ನು ಕಳೆದುಕೊಂಡಿರುವುದು ಎಐಎಡಿಎಂಕೆಗೆ ದೊಡ್ಡ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಡಿಎಂಕೆ ಮೈತ್ರಿಕೂಟವು 1430 ಸ್ಥಾನಗಳಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಎಐಎಡಿಎಂಕೆ 334 ಸ್ಥಾನಗಳನ್ನು ಗೆದ್ದರೆ, ಎಎಂಎಂಕೆ19, ಬಿಜೆಪಿ 31, ಪಿಎಂಕೆ 17, ಡಿಎಂಡಿಕೆ-6 ಸ್ಥಾನಗಳನ್ನು ಪಡೆದಿವೆ,

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular