Friday, November 22, 2024
Google search engine
Homeಮುಖಪುಟಸಮನ್ವಯ ಕವಿ ಚನ್ನವೀರ ಕಣವಿ ನಿಧನ

ಸಮನ್ವಯ ಕವಿ ಚನ್ನವೀರ ಕಣವಿ ನಿಧನ

ಕಣವಿ ಅವರು ಕನ್ನಡ ಭಾಷೆಯ ಪ್ರಮುಖ ಕವಿಗಳು ಮತ್ತು ಬರೆಹಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. 1981ರಲ್ಲಿ ಅವರ ಜೀವ ಧ್ವನಿ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಸಮನ್ವಯ ಕವಿ ಮತ್ತು ಸೌಜನ್ಯದ ಕವಿ ಎಂದೇ ಜನಪ್ರಿಯರಾಗಿದ್ದರು.

ಕನ್ನಡ ಹಿರಿಯ ಸಾಹಿತಿ ಮತ್ತು ಕವಿ ಚನ್ನವೀರ ಕಣವಿ ಬುಧವಾರ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ನಿಧನರಾದರು. ಕೊರೊನ ಸೋಂಕಿನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

ಕನ್ನಡ ಸಾಹಿತ್ಯ ಲೋಕದಲ್ಲಿ ಸಮನ್ವಯ ಕವಿ ಎಂದೇ ಗುರುತಿಸಿಕೊಂಡಿದ್ದ ಡಾ.ಚನ್ನವೀರ ಕಣವಿ ಸಾಹಿತ್ಯ ಲೋಕದಲ್ಲಿ ಅಪಾರ ಕೃಷಿ ಮಾಡಿದ್ದಾರೆ.

ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಜೂನ್ 28, 1928ರಲ್ಲಿ ಸಕ್ಕರೆಪ್ಪ ಮತ್ತು ಪಾರ್ವತಮ್ಮ ದಂಪತಿಗೆ ಜನಿಸಿದ ಕಣವಿ ತಮ್ಮ ಶಾಲಾ ಕಾಲೇಜು ಶಿಕ್ಷಣವನ್ನು ಧಾರವಾಡದಲ್ಲಿ ಪೂರೈಸಿದರು.

1952ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದರು. 1956ರಿಂದ 1983ರ ವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕರಾಗಿ ಕೆಲಸ ಮಾಡಿದರು.

ಕಣವಿ ಅವರು ಕನ್ನಡ ಭಾಷೆಯ ಪ್ರಮುಖ ಕವಿಗಳು ಮತ್ತು ಬರೆಹಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. 1981ರಲ್ಲಿ ಅವರ ಜೀವ ಧ್ವನಿ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಸಮನ್ವಯ ಕವಿ ಮತ್ತು ಸೌಜನ್ಯದ ಕವಿ ಎಂದೇ ಜನಪ್ರಿಯರಾಗಿದ್ದರು.

2011ರಲ್ಲಿ ಅವರಿಗೆ ಸಾಹಿತ್ಯ ಕಲಾ ಕೌಸ್ತುಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಣವಿ ಹಲವಾರು ಕೃತಿಗಳನ್ನು ರಚಿಸಿ ಕಾವ್ಯರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರು ಬರೆದ ಕೃತಿಗಳೆಂದರೆ, ಕಾವ್ಯಾಕ್ಷಿ ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ಶಿಶು ಕಂಡ ಕನಸು, ನೆಲಮುಗಿಲುಗಳ ಮಧ್ಯೆ ಮಣ್ಣಿನ ಮೆರವಣಿಗೆ, ದೀಪಧಾರಿ, ಎರಡು ದಾದಾ ಹೊಂಬೆಳಕು, ಹೀಗೆ ಹಲವು ಕೃತಿಗಳನ್ನು ಬರೆದು ಜನಮನ್ನಣೆ ಗಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular