Monday, September 16, 2024
Google search engine
Homeಮುಖಪುಟ2018-2020 ನಡುವೆ ಸಾಲಬಾಧೆಯಿಂದ 16 ಸಾವಿರ ಮಂದಿ ಆತ್ಮಹತ್ಯೆ

2018-2020 ನಡುವೆ ಸಾಲಬಾಧೆಯಿಂದ 16 ಸಾವಿರ ಮಂದಿ ಆತ್ಮಹತ್ಯೆ

2020ರಲ್ಲಿ 5,213 ಜನರು ದಿವಾಳಿತನ ಮತ್ತು ಸಾಲದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೆ, 2019ರಲ್ಲಿ 5,908 ಮಂದಿ ಹಾಗೂ 2018ರಲ್ಲಿ 4,970 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ.

2018 ಮತ್ತು 2020ರ ನಡುವೆ 16 ಸಾವಿರಕ್ಕೂ ಹೆಚ್ಚು ಜನರು ದಿವಾಳಿತನ ಅಥವಾ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ರಾಜ್ಯಸಭೆಗೆ ತಿಳಿಸಿದ್ದಾರೆ.

9140 ಜನರು ನಿರುದ್ಯೋಗ ಕಾರಣದಿಂದ ತಮ್ಮ ಜೀವನ ಕೊನೆಗೊಳಿಸಿದ್ದಾರೆ ಎಂದು ಬುಧವಾರ ಸಭೆಗೆ ಮಾಹಿತಿ ನೀಡಿದ್ದಾರೆ.

2020ರಲ್ಲಿ 5,213 ಜನರು ದಿವಾಳಿತನ ಮತ್ತು ಸಾಲದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೆ, 2019ರಲ್ಲಿ 5,908 ಮಂದಿ ಹಾಗೂ 2018ರಲ್ಲಿ 4,970 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ.

2020ರಲ್ಲಿ ಒಟ್ಟು 3,548, 2019ರಲ್ಲಿ 2,851 ಮತ್ತು 2018ರಲ್ಲಿ 2,741 ಜನರು ನಿರುದ್ಯೋಗದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಲಿಖಿತ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular