ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ ದತ್ತಾಂಶ ಲಭ್ಯವಿಲ್ಲ ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ತುಕ್ಡೆ, ತುಕ್ಡೆ ಗುಂಪಿನ ನಾಯಕ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಚಿದಂಬರಂ ತುಕ್ಡೆ, ತುಕ್ಡೆ ಎಂದರೆ ಹೊಸತನವನ್ನು ಸೃಷ್ಟಿಸುವ ಮತ್ತು ಬದಲಾವಣೆಯನ್ನು ತರುವುದಕ್ಕೆ ಅಡ್ಡಿಯಾಗಿದೆ ಎಂದು ತಿಳಿಸಿದರು.
ರಾಜ್ಯಸಭೆಯಲ್ಲಿ ಮಾತನಾಡಿದ ಚಿದಂಬರಂ ಬಜೆಟ್ ನಲ್ಲಿ ಮಾಡಿದ ಘೋಷಣೆಗಳ ಅನುಷ್ಠಾನದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೂ ಭಾರತ ವೇಗವಾಗಿ ಸಾಗುತ್ತಿದೆ ಎಂದು ಹೇಳುತ್ತದೆ. ನಿಜವಾಗಿಯೂ ಅದು ಆ ಸ್ಥಳದಿಂದ ಮುಂದೆ ಸಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಇಲ್ಲದಿದ್ದರೆ ರಾಜ್ಯಸಭೆಯು ರಾಜ್ಯಗಳ ಮಂಡಳಿಯಾಗುತ್ತಿರಲಿಲ್ಲ. ಬದಲಿಗೆ ರಾಜಕುಮಾರರ ಪರಿಷತ್ತು ಆಗಿರುತ್ತಿತ್ತು ಎಂದರು. ಪ್ರಾದೇಶಿಕ ಆಡಳಿತಗಾರರು ರಾಣಿ ಎಲಿಜಬೆತ್ 2ನ್ನು ಹೊಗಳುತ್ತ ಮಾತನಾಡುತ್ತಿದ್ದರು ಎಂದು ಟೀಕಿಸಿದರು.
ಮೋದಿ ಅವರು ಉದ್ಯೋಗಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದಾರೆ. ಆದರೆ ಸರ್ವಶಕ್ತ ಭಾರತ ಸರ್ಕಾರದಲ್ಲಿ 8,72,243 ಖಾಲಿ ಹುದ್ದೆಗಳ ವಿರುದ್ದ 78,264 ಜನರನ್ನು ನೇಮಕ ಮಾಡುವ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದರು.
ಅಡಚಣೆಯು ಬದಲಾವಣೆ ಮತ್ತು ಆವಿಷ್ಕಾರಕ್ಕೆ ಒಂದು ಮಾರ್ಗವಾಗಿದೆ. ಇಂದು ವ್ಯವಹಾರದಲ್ಲಿ ಅಡಚಣೆ ಇದೆ. ವಿಜ್ಞಾನದಲ್ಲಿ ಅಡಚಣೆ ಇದೆ. ತಂತ್ರಜ್ಞಾನದಲ್ಲಿ ಅಡ್ಡಿ ಇದೆ. ಪ್ರತಿ ಚಟುವಟಿಕೆಯಲ್ಲಿ ಅಡ್ಡಿ ಇದೆ. ಏಕೆಂದರೆ ಅಡ್ಡಿಯು ಹೊಸತನವನ್ನು ಸೃಷ್ಟಿಸುತ್ತದೆ. ಅದು ತರುವ ಪ್ರಚೋದನೆಯನ್ನು ಉಂಟುಮಾಡುತ್ತದೆ ಎಂದರು.