Friday, October 18, 2024
Google search engine
Homeಮುಖಪುಟಯುಜಿಸಿ ಅಧ್ಯಕ್ಷರಾಗಿ ಜೆಎನ್.ಯು ಕುಲಪತಿ ಜಗದೀಶ್ ಕುಮಾರ್ ನೇಮಕ

ಯುಜಿಸಿ ಅಧ್ಯಕ್ಷರಾಗಿ ಜೆಎನ್.ಯು ಕುಲಪತಿ ಜಗದೀಶ್ ಕುಮಾರ್ ನೇಮಕ

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಮುಂದಿನ ಅಧ್ಯಕ್ಷರಾಗಿ ಜೆಎನ್.ಯು ಕುಲಪತಿ ಎಂ.ಜಗದೀಶ್ ಕುಮಾರ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.

2018ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಪ್ರೊ.ಡಿ.ಪಿ.ಸಿಂಗ್ ಅವಧಿ ಪೂರೈಸಿದ ನಂತರ ರಾಜಿನಾಮೆ ನೀಡಿದ್ದರು. ಇದರಿಂದ ಯುಜಿಸಿ ಅಧ್ಯಕ್ಷರ ಹುದ್ದೆ ಖಾಲಿಯಾಗಿತ್ತು. ಜೊತೆಗೆ ಉನ್ನತ ಶಿಕ್ಷಣ ನಿಯಂತ್ರಕರ ಉಪಾಧ್ಯಕ್ಷರ ಹುದ್ದೆಯೂ ಖಾಲಿ ಇದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಜವಾಹರಲಾಲ್ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಕುಮಾರ್ ಐದು ವರ್ಷಗಳ ಅವಧಿ ಜನವರಿ 26ಕ್ಕೆ ಕೊನೆಗೊಂಡಿದೆ. ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರೆಗೆ ಕುಲಪತಿ ಹುದ್ದೆಯಲ್ಲೇ ಮುಂದುವರೆಯಲು ಸಚಿವಾಲಯ ಅವಕಾಶ ನೀಡಿದೆ.

ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿನ ಜ್ಞಾನಕ್ಕೆ ಕುಮಾರ್ ಅವರನ್ನು ಪರಿಗಣಿಸಲಾಗಿದೆ. ಮದ್ರಾಸ್ ಇಂಡಿನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಲೆಕ್ಟ್ರಿಕಲ್ ಇಂಜಿಯರಿಂಗ್ ವಿಭಾಗದ ಎಂ.ಎಸ್ ಮತ್ತು ಪಿಎಚ್ಡಿ ಪದವಿಗಳನ್ನು ಪಡೆದಿದ್ದಾರೆ.

ಜುಲೈ 1994 ಮತ್ತು ಡಿಸೆಂಬರ್ 1995ರ ನಡುವೆ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಖರಗಪುರದ ಐಐಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular